ಮೈಸೂರು,ಜನವರಿ,31,2021(www.justkannada.in) : ನಾಳೆ ಕೇಂದ್ರ ಸರ್ಕಾರದ ಬಜೆಟ್. ಈ ಸರ್ಕಾರದಿಂದ ನಾನು ಯಾವ ನಿರೀಕ್ಷೆ ಇಟ್ಟಿಲ್ಲ. ನಿಮಗೇನಾದ್ರು ನಿರೀಕ್ಷೆ ಇದೆಯಾ? ಎಕಾನಾಮಿಕ್ ಸರ್ವೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. ಜಿಡಿಪಿ ಗಣನೀಯವಾಗಿ ಪಾತಳಕ್ಕೆ ಇಳಿದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.ಮನಮೋಹನ್ ಸಿಂಗ್ ಅವರ ಬಳಿಕ ಜಿಡಿಪಿ ಪ್ರತಿ ವರ್ಷ ಕುಸಿದಿದೆ. 2019/20 ರಲ್ಲಿ ಜಿಡಿಪಿ 4.2 ಇತ್ತು, ಆ ವೇಳೆ ಕರೋನಾ ಇರಲಿಲ್ಲ. ಈ ವರ್ಷ 20/21 ರಲ್ಲಿ ಜಿಡಿಪಿ -7.7% ಇದೆ. ಅದನ್ನ ಮುಚ್ಚಿ ಹಾಕಲು 21/22ಕ್ಕೆ 11 ಪರ್ಸೆಂಟ್ ಆಗುತ್ತೆ ಅಂತಾರೆ. ಇದನ್ನು ಸಹ ಎಕಾನಾಮಿಕ್ ಸರ್ವೆಯಲ್ಲಿ ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದರು.
ಜಿಡಿಪಿ ವಿಷಯದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಜನರಿಗೆ ದಾರಿ ತಪ್ಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ..!
ರಾಷ್ಟ್ರಪತಿ ಭಾಷಣ ತ್ಯಜಿಸುವ ಹೆಚ್.ಡಿ.ದೇವೆಗೌಡ ಹೇಳಿಕೆ ಹಿನ್ನಲೆ. ಅವರ ಬಗ್ಗೆ ನಾನು ಮಾತೆ ಆಡಲ್ಲ. ನನ್ನ ಪ್ರಕಾರ ಜೆಡಿಎಸ್ ‘ಇಟ್ಸ್ ನಾಟ್ ಎ ಪೊಲಿಟಿಕಲ್ ಪಾರ್ಟಿ ಎಂದಿದ್ದಾರೆ.
ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ನಗರಪ್ರದೇಶದಲ್ಲಿ 9.2% ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ 8.9 ರಷ್ಟು ನಿರುದ್ಯೋಗ ಇದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ 2.9ರಷ್ಟು ಮಾತ್ರ ನಿರುದ್ಯೋಗ ಸಮಸ್ಯೆ ಇತ್ತು. ದೇಶದಲ್ಲಿ 9.5ರಷ್ಟು ಪದವೀಧರರು, ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿ ಹಾಗೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡದಿದ್ದರೆ, ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ ಎಂದು ಬೇಸರವ್ಯಕ್ತಪಡಿಸಿದರರು.
ಮೇಯರ್ ಚುನಾವಣೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ
ಚುನಾವಣೆಗೂ ಮುನ್ನವೇ ದೋಸ್ತಿ ಖತಂ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ವ ಪತನ. ಕಾಂಗ್ರೆಸ್ ಸದಸ್ಯರಿಗೆ ಮೇಯರ್ ಆಗುವ ಕನಸು ಭಗ್ನ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಅಲ್ಲದೇ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ. ಈ ಹಿಂದೆ ಸ್ಥಳೀಯರು ಮೈತ್ರಿ ಮಾಡಿಕೊಂಡಿದ್ದರು. ಆದರೆ, ಇದೀಗ ಯಾರ ಜೊತೆಯೂ ಮೈತ್ರಿ ಇಲ್ಲ ಎಂದು ತಿಳಿಸಿದ್ದಾರೆ.
key words : Center-Government-Budget-Which-Expectation-Don’t-Opposition-leader-Siddaramaiah-Criticism