ನವದೆಹಲಿ,ಜೂನ್,6,2023(www.justkannada.in): ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ರೈತರನ್ನು ಉತ್ತೇಜಿಸುವ ಸಲುವಾಗಿ 2023-24 ಬೆಳೆ ವರ್ಷಕ್ಕೆ ಭತ್ತದ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಾಲ್‌ಗೆ 143 ರೂ. ಹೆಚ್ಚಳ ಮಾಡಿ 2,183 ರೂಪಾಯಿಗೆ ಹೆಚ್ಚಿಸಲು ಅನುಮೋದನೆ ನೀಡಿದೆ
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಕೃಷಿಯಲ್ಲಿ ನಾವು ಸಿಎಸಿಪಿ (ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ) ಶಿಫಾರಸುಗಳನ್ನು ಆಧರಿಸಿ ಕಾಲಕಾಲಕ್ಕೆ ಎಂಎಸ್‌ಪಿಯನ್ನು ನಿಗದಿಪಡಿಸುತ್ತಿದ್ದೇವೆ. ಈ ವರ್ಷ ಮುಂಗಾರು ಬೆಳೆಗಳ ಎಂಎಸ್‌ಪಿ ಹೆಚ್ಚಳವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಎಂದು ತಿಳಿಸಿದರು.
ಸಾಮಾನ್ಯ ದರ್ಜೆಯ ಭತ್ತದ ಎಂಎಸ್‌ಪಿಯನ್ನು 2023-24ರ ಬೆಳೆ ವರ್ಷಕ್ಕೆ 143 ರೂ. ರಿಂದ 2,183 ರೂ, ಗೆ ಹೆಚ್ಚಿಸಲಾಗಿದೆ. ಹಿಂದಿನ ವರ್ಷ 2,040 ರೂ. ರಿಂದ ‘ಎ’ ದರ್ಜೆಯ ಭತ್ತದ ಬೆಂಬಲ ಬೆಲೆಯನ್ನು ಕ್ವಿಂಟಲ್ 2,060 ರೂ.ಗೆ ಹೆಚ್ಚಿಸಲಾಗಿದೆ ಎಂದರು.
ಹೆಸರು ಬೆಳೆಗೆ ಶೇಕಡಾ 10.4 ರಷ್ಟು ಹೆಚ್ಚಾಗಿದೆ.2023-23 ಬೆಳೆ ವರ್ಷದಲ್ಲಿ ಪ್ರತಿ ಕ್ವಿಂಟಾಲ್‌ಗೆ 8,558 ರೂ. ಮಾಡಲಾಗಿದೆ. ಹಿಂದಿನ ವರ್ಷದಲ್ಲಿ ಕ್ವಿಂಟಲ್‌ಗೆ 7,755 ರೂ. ಇತ್ತು ಎಂದು ಮಾಹಿತಿ ನೀಡಿದರು.
Key words: Central- agrees – hike – minimum support price – Kharif- crops