ದೆಹಲಿ, ಏಪ್ರಿಲ್ 29, 2020 (www.justkannada.in): , ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದಾಗಲಿವೆ ಎಂಬ ಎಲ್ಲ ಸುದ್ದಿಗಳಿಗೆ ಈ ಮೂಲಕ ಬೋರ್ಡ್ ಅಂತ್ಯ ಹಾಡಿದೆ. ಅಧಿಕೃತ ಟ್ವೀಟ್ ನಲ್ಲಿ ಸಿಬಿಎಸ್ಇ ಮಂಡಳಿಯು 29 ವಿಷ್ಯಗಳ ಪರೀಕ್ಷೆ ನಡೆಸಲಾಗುವುದು ಎಂದಿದೆ.
ಏಪ್ರಿಲ್ 1 ರ ಸುತ್ತೋಲೆಯಂತೆ ಪರೀಕ್ಷೆಗಳು ನಡೆಯಲಿವೆ. cbse.nic.in ನಲ್ಲಿಯೂ ಈ ಬಗ್ಗೆ ಮಾಹಿತಿ ಲಭ್ಯವಿದೆ.
ಸಿಬಿಎಸ್ಇ ಬೋರ್ಡ್ ಪರೀಕ್ಷೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿವೆ. 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳು 1.4.20 ದಿನಾಂಕದ ಸುತ್ತೋಲೆಯಂತೆ ನಡೆಯಲಿದೆ ಎಂದು ಟ್ವೀಟ್ ಮಾಡಲಾಗಿದೆ.
ಏಪ್ರಿಲ್ 1,2020ರ ಸುತ್ತೋಲೆ ಪ್ರಕಾರ, 10 ಮತ್ತು 12ನೇ ತರಗತಿ ವಿದೇಶಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಹಾಗೆ ಈಶಾನ್ಯ ದೆಹಲಿ ವಿದ್ಯಾರ್ಥಿಗಳ ಪರೀಕ್ಷೆ ರದ್ದಾಗಿದೆ.