ನವದೆಹಲಿ,ಫೆ,1,2020(www.justkannada.in): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಇಂದು ಮಂಡನೆಯಾಗಿದ್ದು, ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಸಂಸತ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದರು. ಬಜೆಟ್ ಎಫೆಕ್ಟ್ನಿಂದಾಗಿ ಯಾವೆಲ್ಲ ಅಗ್ಗ, ಯಾವುದು ದುಬಾರಿಯಾಗಲಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಸಿಗರೇಟ್, ತಂಬಾಕು, ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದ್ದು ಹೀಗಾಗಿ ಸಿಗರೇಟ್, ತಂಬಾಕು, ಮದ್ಯದ ಬೆಲೆ ಏರಿಕೆಯಾಗಲಿದೆ. ಸ್ಟೀಲ್ ತಾಮ್ರದ ವಸ್ತಗಳ ಮೇಲೆ ಶೇ. 20ರಷ್ಟು ಸುಂಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಇವುಗಳ ಬೆಲೆ ಏರಿಕೆಯಾಗಲಿದೆ.
ಇನ್ನು ಗೃಹ ಉಪಯೋಗಿ ಪಿಂಗಾಣಿ, ಕಚ್ಚಾಸಕ್ಕರೆ, ಕೃಷಿ ಆಧಾರಿತ ಜಾನುವಾರಗಳ , ವೈದ್ಯಕೀಯ ಸಲಕರಣೆ, ಕೆನೆ ತೆಗೆದ ಹಾಲು. ವಾಣಿಜ್ಯ ವಾಹನಗಳ ಬೆಲೆ, ಪೀಠೋಪಕರಣಗಳು, ಸ್ಟೀಲ್.ಸೋಯಾ ಫೈಬರ್. ಸೋಯಾ ಫೈಬರ್ಗಳ, ಪೆಟ್ರೋಲ್-ಡೀಸೆಲ್, ಗೋಡಂಬಿ, ತಾಳೆ ಎಣ್ಣೆ, ಬೆಳ್ಳಿ ಆಭರಣಗಳು,ಅಮದಾದ ಪಾದರಕ್ಷೆಗಳು ಬಂಗಾರದ ಆಭರಣಗಳ ಬೆಲೆ ಹೆಚ್ಚಳವಾಗಬಹುದು
ಈನಡುವೆ ನ್ಯೂಸ್ ಪ್ರಿಂಟ್, ಚರ್ಮೋತ್ಪನ್ನ, ಹಗುರ ಕೋಟೆಡ್ ಪೇಪರ್, ಗೊಬ್ಬರ, ಬೀಜಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Key words: Central budget- cheap – expensive.