ಮೈಸೂರು,ಫೆಬ್ರವರಿ,1,2022(www.justkannada.in): ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಅಂತಾರೆ. ಇದು ಸಬ್ ಕ ವಿನಾಶ್ ಬಜೆಟ್. ಇದು ದೇಶವನ್ನು ವಿನಾಶ ಮಾಡುವ ಬಜೆಟ್. ಈ ಬಜೆಟ್ ನಲ್ಲಿ ಕರ್ನಾಟಕ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ.
ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡಿಸಿದ್ದಾರೆ. ನಾನು ಬಜೆಟ್ ಮೇಲೆ ಬಹಳ ನಿರೀಕ್ಷೆ ಇರಲಿಲ್ಲ. ರೈತರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು. ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಈಡೇರಿಲ್ಲ ಎಂದು ಕಿಡಿಕಾರಿದರು.
ಕಳೆದ ವರ್ಷ ಸುಮಾರು 34ಲಕ್ಷ ಕೋಟಿ ರೂ ಬಜೆಟ್ ಮಂಡಿಸಿದರು. ಈ ವರ್ಷ 39.45ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ 4 ಲಕ್ಷದ 61ಸಾವಿರ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ವರ್ಷದ 11ಲಕ್ಷ 87ಸಾವಿರದ 180ಕೋಟಿ ರೂ ಸಾಲ ಮಾಡಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಮೇಲೆ ಇದ್ದ ಸಾಲ 135ಲಕ್ಷ 87ಸಾವಿರ ಕೋಟಿ ರೂ. ಮಹಮೋಹನ್ ಸಿಂಗ್ ಕಾಲದಲ್ಲಿ ಇದ್ದಂತ ಸಾಲ 53ಲಕ್ಷ 11ಸಾವಿರ ಕೋಟಿ. 8ವರ್ಷದ ಅವಧಿಯಲ್ಲಿ ಬಿಜೆಪಿ 93ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಒಟ್ಟು ಬಿಜೆಪಿ ಸರ್ಕಾರ ಮಾಡಿರುವ ಸಾಲದ ಬಡ್ಡಿಯೇ 9ಲಕ್ಷದ 40ಸಾವಿರ 651ಕೋಟಿ ಬಡ್ಡಿ ಕಟ್ಟಬೇಕು. ಹೀಗಾಗಿ ದೇಶ ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಟೀಕಿಸಿದರು.
ನರೇಗಾ ಇಲ್ಲದೆ ಇದ್ದಿದ್ದರೆ ಹಳ್ಳಿಗಳಿಗೆ ಬಹಳ ಕಷ್ಟ ಆಗೋದು. ಇದು ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿ ಮಾಡಿದ್ರು. ಈ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ 38,169 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ. ಗ್ರಾಮೀಣ ಜನರಿಗೆ ಉದ್ಯೋಗ ಕೊಡಬೇಕಾದ್ರೆ ನರೇಗಾ ಅನುದಾನ ಹೆಚ್ಚು ಮಾಡಬೇಕಿತ್ತು. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದ್ದರೆ ಕೇವಲ 80 ಕೋಟಿ ಅಷ್ಟೇ ಹೆಚ್ಚು ಮಾಡಿದ್ದಾರೆ. ಅಹಾರ ಮತ್ತು ನಾಗರೀಕ ಸರಬರಾಜು ಕ್ಷೇತ್ರ ಸಬ್ಸಿಡಿ 79638 ಕೋಟಿ ಕಡಿಮೆಯಾಗಿದೆ. ಪುಡ್ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಇದು ಉಚಿತ ಅಕ್ಕಿ ಮೇಲೆ ಪರಿಣಾಮ ಬೀರಲಿದೆ. ಜಿಡಿಪಿ 46 ಪರ್ಸೆಂಟ್ ಮಹನೋನ್ ಸಿಂಗ್ ಕಾಲದಲ್ಲಿ ಇದ್ರೆ ಈವಾಗ 62 ಪರ್ಸೆಂಟ್ ಆಗಿದೆ. ನರೇಂದ್ರ ಮೋದಿ ಕಾಲ ಸುಭೀಕ್ಷವಾಗಿದೆ ಅನ್ನೋದು ಸುಳ್ಳು ಎಂದು ವಾಗ್ದಾಳಿ ನಡೆಸಿದರು.
ಉನ್ನತ ಶಿಕ್ಷಣಕ್ಕೆ ನ್ಯಾಷನಲ್ ಎಜುಕೇಶನಲ್ ಪಾಲಿಸಿ ಬೇರೆ ತಂದಿದ್ದಾರೆ. 4779 ಕೋಟಿ ರೂಪಾಯಿ ಗಳನ್ನ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಾಡಿದ್ದಾರೆ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ. 35 ಸಾವಿರ ಕೋಟಿ ರೂಪಾಯಿ ಗೊಬ್ಬರದ ಸಬ್ಸಿಡಿ ಕಡಿಮೆಯಾಗಿದೆ ಮುಂದೆ ಗೊಬ್ಬರದ ಬೆಲೆ ಏರಿಕೆಯಾಗಲಿದೆ ಎಂದು ಸಿದ್ಧರಾಮಯ್ಯ ಹೇಳಿದರು.
ವಾಜಪೇಯಿ ಕಾಲದಲ್ಲಿ ನದಿ ಜೋಡಣೆ ಮಾಡುತ್ತೇವೆ ಅಂತಾ ಹೇಳಿದ್ದರು. ಈಗ ಮತ್ತೆ ನದಿ ಜೋಡಣೆ ಮಾಡ್ತೀವಿ ಅಂತಿದ್ದಾರೆ. ನಮಗೆ ಮಹದಾಯಿ ಯೋಜನೆಗೆ ನೋಟಿಫಿಕೇಷನ್ ಆಗಿದೆ. ಇನ್ನೂ ಕೆಲಸ ಮಾಡಿಲ್ಲ. ಮೇಕೆದಾಟು ಯೋಜನೆಗೆ ಫಾರೆಸ್ಟ್ ಕ್ಲಿಯರೆನ್ಸ್ ಕೊಡಿಸಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನ ಆಗಿಲ್ಲ. ಭದ್ರಾ ಮೆಲ್ದಂಡ್ ಯೋಜನೆಗೆ ಆಗಿಲ್ಲ ಎಂದು ಸಿದ್ಧರಾಮಯ್ಯ ಕೇಂದ್ರದ ವಿರುದ್ಧ ಗುಡುಗಿದರು.
ಕೃಷಿ, ಶಿಕ್ಷಣ, ನಿರುದ್ಯೋಗಕ್ಕೆ ಒತ್ತು ಕೊಡಬೇಕಿತ್ತು. ಅದ್ಯಾವುದೂ ಇಲ್ಲಿ ಆಗಿಲ್ಲ. ಇವತ್ತು ನಿರುದ್ಯೋಗ ಬೆಳೆಯುತ್ತಿದೆ. ಸಣ್ಣ, ಮಧ್ಯಮ ಕೈಗಾರಿಕಾ ಮುಚ್ಚುತ್ತಿವೆ. 62 ಪರ್ಸೆಂಟ್ ನಿರುದ್ಯೋಗ ಹೆಚ್ಚಾಗಿದೆ. ಈ ಬಜೆಟ್ ಜನರ ನಿರೀಕ್ಷೆಗೆ ಸ್ಪಂದಿಸುವ ಬಜೆಟ್ ಅಲ್ಲ. ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯ ಬಜೆಟ್ ಅಲ್ಲ. ಇದು ದೇಶವನ್ನು ವಿನಾಶ ಮಾಡುವ ಬಜೆಟ್. ದೇಶದ ಬೆಳವಣಿಗೆ ದೃಷ್ಟಿಯಿಂದ ನಿರಾಶದಾಯಕ ಬಜೆಟ್. ಗೋವಾ,ಯುಪಿ, ಮಣಿಪುರ್ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆ ಇದೆ. ಅ ರಾಜ್ಯಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ರು, ಅದು ಆಗಿಲ್ಲ ಎಂದು ಟೀಕಿಸಿದರು.
ಗತಿ ಶಕ್ತಿ ಹೆಸರಲ್ಲಿ 7 ಮೂಲಸೌಕರ್ಯ ಮಾಡುವುದಾಗಿ ಹೇಳಿದ್ದಾರೆ. ಬಜೆಟ್ ಅಂದ್ರೆ ಆದ್ಯತೆಗಳು, ಸಮಸ್ಯೆಗೆ ಪರಿಹಾರ ಇರಬೇಕು. 25 ವರ್ಷ ಇವರೇ ಇರುತ್ತಾರಾ ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
Key words: central budget-Former CM-Siddaramaiah