ನವದೆಹಲಿ,ಜುಲೈ,23,2024 (www.justkannada.in): ಇಂದು ಮಂಡನೆಯಾದ 2024-25ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆದಾರರಿಗೆ ಸಿಹಿಸುದ್ದಿ ನೀಡಲಾಗಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಾಯ ತೆರಿಗೆ ಭಾರ ಕಡಿಮೆ ಮಾಡಿದೆ.
ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಪದ್ದತಿ ಸರಳೀಕರಣಕ್ಕೆ ಬಜೆಟ್ ಒತ್ತು ನೀಡಲಾಗುತ್ತದೆ. ಆದಾಯ ತೆರಿಗೆ ಸಲ್ಲಿಕೆ ವಿಳಂಬ ಅಪರಾಧ ಅಲ್ಲ ಎಂದರು. ಇನ್ನು ಪರಿಷ್ಕೃತ ʻತೆರಿಗೆ ದರವನ್ನ ಘೋಷಣೆ ಮಾಡಿದರು.
ಪರಿಷ್ಕೃತ ತೆರಿಗೆ ದರ ಈ ಕೆಳಕಂಡಂತಿದೆ.
0 ಯಿಂದ 3 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ
3 ರಿಂದ 7 ಲಕ್ಷದವರೆಗೆ ಶೇ 5 ರಷ್ಟು ತೆರಿಗೆ
7 ರಿಂದ 10 ಲಕ್ಷದವರೆಗೆ ಶೇ 10ರಷ್ಟು ತೆರಿಗೆ
10 ರಿಂದ 12 ಲಕ್ಷಕ್ಕೆ ಶೇ 15 ರಷ್ಟು ತೆರಿಗೆ
12 ರಿಂದ 15 ಲಕ್ಷಕ್ಕೆ ಶೇ 20 ರಷ್ಟು ತೆರಿಗೆ
15 ಲಕ್ಷ ಮೇಲ್ಪಟ್ಟು ಶೇ 30 ರಷ್ಟು ತೆರಿಗೆ
Key words: central Budget, Revised, Tax Rate