ನವದೆಹಲಿ,ಫೆಬ್ರವರಿ,1,2021(www.justkannada.in): ಕೊರೋನಾದಿಂದ ಭಾರೀ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಯನ್ನ ಮೇಲೆತ್ತುವ ಜೊತೆಗೆ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವ ಪ್ರಯತ್ನ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
ಇಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೊರೋನಾ ಎಫೆಕ್ಟ್ ನ ಆರ್ಥಿಕ ಕೊರತೆಯ ನಡುವೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸಲಿದ್ದು, ಹಲವು ನೀರಿಕ್ಷೆಗಳನ್ನ ಒಳಗೊಂಡಂತೆ ಬಜೆಟ್ ನತ್ತ ಎಲ್ಲರ ಚಿತ್ತವಿದೆ.
ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿರುವ ಹಣಕಾಸು ವರ್ಷದಲ್ಲಿ 60 ಸಾವಿರ ಕೋಟಿ ಕೊರತೆ ಸಾಧ್ಯತೆ ಇದ್ದು, ಬಜೆಟ್ ನಲ್ಲಿ ಆರೋಗ್ಯ,ಕೃಷಿ,ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎನ್ಪಿಎ ಸಮಸ್ಯೆ ನಿಭಾಯಿಸಲು ಬ್ಯಾಡ್ ಬ್ಯಾಂಕ್ ಸ್ಥಾಪನೆ, ಉತ್ಪಾದನಾ ವಲಯಕ್ಕೆ ಉತ್ತೇಜನ , ನರೇಗಾ ಯೋಜನೆಗೆ ಹೆಚ್ಚಿನ ಅನುದಾನ ಘೋಷಿಸುವ ಸಾಧ್ಯತೆ ಇದೆ.
ಸುಲಭ ಸಾಲ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆ ವಲಯಗಳಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಮಹತ್ವದ ಯೋಜನೆಗಳು ಹಾಗೂ ಅನುದಾನ ಸಿಗುವ ನಿರೀಕ್ಷೆಗಳಿವೆ.
Key words: Central budget –today-High priority – health-agriculture- job creation.