ಮೈಸೂರು,ಸೆಪ್ಟಂಬರ್,28,2021(www.justkannada.in): ರಾಷ್ಟ್ರ ಮಟ್ಟದ ಜಾತಿ ಜನಗಣತಿಯ ಕೂಗು ಎದ್ದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಜಾತಿ ಜನಗಣತಿ ಮಾಡಲು ಸಾಧ್ಯವಿಲ್ಲ (ಹಿಂದುಳಿದ ವರ್ಗಗಳ) ವೆಂದು ಹೇಳುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಏಳಿಗೆಗೆ ವಿರೋಧ ವಾಗಿರುವುದನ್ನು ಆ ಮೂಲಕ ಸಾಮಾಜಿಕ ನ್ಯಾಯವನ್ನು ಹಿಂದುಳಿದ ವರ್ಗಗಳಿಗೆ ಮರಿಚಿಕೆ ಮಾಡಲು ಕಟಿಬದ್ಧ ವಾಗಿರುವುದು ಸಾಬೀತುಪಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್ ಶಿವರಾಂ ಕಿಡಿಕಾರಿದರು.
ಹಿಂದುಳಿದ ವರ್ಗಗಳ ಜಾತಿ ಜನಗಣತಿಗೆ ಆದೇಶ ಮಾಡಲು ಒತ್ತಾಯಿಸಿ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಕೆ.ಎಸ್ ಶಿವರಾಂ, ಸಮ ಸಮಾಜದ ನಿರ್ಮಾಣಕ್ಕೆ ಸರ್ಕಾರದ ಸವಲತ್ತುಗಳು ಸಮಾಜ ಹಂಚಿಕೆಗೆ ಹಾಗೂ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಜಾತಿವಾರು ಜನಗಣತಿ ಬಹಳ ಪ್ರಮಿಖವಾದುದು. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು ರಾಷ್ಟ್ರ ಮಟ್ಟದಲ್ಲಿ ಜಾತಿ ಜನಗಣತಿ ಮಾಡಿಸಿದ್ದರು (1931) ಅನಂತರ ಇಲ್ಲಿಯವರೆಗೂ ರಾಷ್ಟ್ರಮಟ್ಟದಲ್ಲಿ ಹಿಂದುಳಿದ ವರ್ಗಗಳ ಜಾತಿ ಜನಗಣತಿ ಆಗಿಲ್ಲ, ಪ್ರಸ್ತುತ ಸಂದರ್ಭದಲ್ಲಿ ಹಿಂದುಳಿದ ಜಾತಿಗಳ ಜನಗಣತಿ ಮಾಡುವುದರಿಂದ ಸಂವಿಧಾನಬದ್ಧವಾಗಿ ಅತಿ ಹಿಂದುಳಿದ ಜಾತಿಗಳಿಗೆ ಅವುಗಳ ಹಕ್ಕನ ಪಡೆಯಲು ಆ ಮಾಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಬಿ.ಜೆ.ಪಿ- ಆರ್ ಎಸ್ ಎಸ್ ಗೆ ಹಿಂದುಳಿದ ವರ್ಗಗಳ ಬಗ್ಗೆ ಅಸಡ್ಡೆ.
ಹಿಂದುಳಿದ ವರ್ಗಗಳ, ಜಾತಿ ಜನಗಣತಿ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿರುವುದು ತೀವ್ರ ಖಂಡನೀಯ. ಬಿ.ಜೆ.ಪಿ ಮತ್ತು, ಆರ್ ಎಸ್ ಎಸ್ ಹಿಂದಳಿದ ಹಾಗೂ ಅತಿ ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿವೆ. ಎಲ್ಲಾ ವಿಧವಾದ ಪ್ರಾಣಿಗಳು ಪಕ್ಷಿಗಳು, ಗಿಡಮರಗಳ ಗಣತಿಯನ್ನು ಸರ್ಕಾರ ಮಾಡುತ್ತದೆ. ಆದರೆ ಇತರೇ ಹಿಂದುಳಿದ ವರ್ಗಗಳ ಗಣತಿ ಮಾತ್ರ ಆಗುವುದಿಲ್ಲ, ಬಿಜೆಪಿ -ಆರ್.ಎಸ್.ಎಸ್ ನರಿಗೆ ಹಿಂದುಳಿದ ವರ್ಗದವರ ಬಗ್ಗೆ ಯಾಕೆ ಇಷ್ಟು ಅಸಡ್ಡೆ? ಜಾತಿ ಜನಗಣತಿಯಿಂದ ಎಲ್ಲರಿಗೂ ಪ್ರಯೋಜನವಾಗುತ್ತಿತ್ತು. ಅದು ಅಯಾಯಾ ಜಾತಿಯ ಜನರ ಚಿತ್ರಣವನ್ನು ಹೇಳುತ್ತಿತ್ತು. ಅದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾತಿ ಜನಗಣತಿ ಸಾಧ್ಯವಿಲ್ಲವೆಂದು ಹೇಳುವುದರ ಮೂಲಕ ತಮ್ಮ ನಿಜ ಬಣ್ಣವನ್ನ ಬಯಲು ಮಾಡಿಕೊಂಡಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಾ’ ಎಂದು ಘೋಷಣೆ ಕೂಗುವ ಪ್ರಧಾನ ಮಂತ್ರಿಗಳು ಹಿಂದುಳಿದ ವರ್ಗಗಳನ್ನು ಮೂಲೆಗುಂಪು ಮಾಡುವ ಈ ಘೋಷಣೆಗೆ ಮಾರಕವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತು ಆರ್ ಎಸ್ ಎಸ್ .ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯುವರು ಹಿಂದುಳಿದ ವರ್ಗಗಳಿಗೆ ವಂಚಿಸುತ್ತಿದಾರೆ. ನಿಮ್ಮ ಈ ಹಿಂದುಳಿದ ವರ್ಗಗಳ ವಿರೋಧಿ ನೀತಿಗೆ ಧಿಕ್ಕಾರವಿರಲಿ. ಇನ್ನಾದರೂ ಎಚ್ಚೆತ್ತು ಕೂಡಲೇ ಹಿಂದುಳಿದ ವರ್ಗಗಳ ಜಾತಿ ಜನಗಣತಿಗೆ ಆದೇಶ ಮಾಡಲು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೇಂದ್ರ, ಮತ್ತು ರಾಜ ಸರ್ಕಾರ ಗಳಿಗೆ ಈ ವರ್ಗಗಳು ತಕ್ಕ ಪಾಠ ಕಲಿಸಿ ಅಧಿಕಾರದಿಂದ ಕಿತ್ತೆಸೆಯುವ ದಿನಗಳು ದೂರವಿಲ್ಲ ಹಾಗೂ ರಾಜ್ಯ ಸರ್ಕಾರ ರಾಜ್ಯದಲ್ಲಿ ಸಾಮಾಜಿಕ ಹಾಗಾ ಶೈಕ್ಷಣಿಕ ಸಮೀಕ್ಷೆ 2015 ಅನ್ನು ಕೂಡಲೇ ಅದರ ವರದಿಯನ್ನು ಬಿಡುಗಡೆ ಮಾಡಿ ಈ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತೇವೆ ಎಂದರು.
ಈ ಪತ್ರ ಚಳವಳಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಮುಖಂಡರಾದಂತಹ ಎಂ. ಲೋಕೇಶ ಕುಮಾರ್, ಮಾದಾಪುರ ಆರ್.ಕೆ ರವಿ, ಮಹೇಂದ್ರ ಕಾಗಿನೆಲೆ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷರಾದ ಹೆಚ್.ಎಸ್ ಪ್ರಕಾಶ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಯೋಗೀಶ್ ಉಪ್ಪಾರ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎನೆ.ಆರ್ ನಾಗೇಶ ಜಿಲ್ಲಾ ಈ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ರಾಜಶೇಖರ ಮಾಜಿ ನಗರ ಪಾಲಿಕೆ ಸದಸ್ಯರಾದ ಸುನೀಲ್, ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕರಾದ ಚೌಹಳ್ಳಿ, ಪುಟ್ಟಸ್ವಾಮಿ, ಮುಖಂಡರಾದರ ರೋಹಿತ್, ಹಿನಕಲ್ ಪ್ರಕಾಶ್, ಎಸ್.ಆರ್.ರವಿಕುಮಾರ, ಬ್ರಾಂಡವೇ ಕಿರಣ: ರವಿ ಜೆ, ಕಾಡನಹಳ್ಳಿ, ಡಿ.ಸಾವಿಗೌಡ ಎಂ.ಎಸ್. ಚಂದ್ರ ಶೇಖರ ಕವಿತಾ ಕಾಳೆ, ವಿನೋದರಾಜ್, ಮಂಜುನಾಥ, ಎಂ. ಇತರರು ಈ ಪತ್ರ ಚಳವಳಿ ಭಾಗವಹಿಸಿದ್ದರು.
Key words: central- determination – social justice – backward classes -KS Shivaram -mysore
ENGLISH SUMMARY…
The Govt. of India wants to make social justice disappear for backward castes: K.S. Shivaram
Mysuru, September 28, 2021 (www.justkannada.in): As the demand for national level caste-based census is increasing the BJP led government in the center has informed the Hon’ble Supreme Court on 23.09.2021 that it is not possible to conduct the caste-based census (backward castes). This shows that the Govt. of India is against the development of backward castes and is committed to making social justice disappear for the backward castes, opined Karnataka State Backward Castes Awareness Forum State President K.S. Shivaram.
The Karnataka State Backward Castes Awareness forum had organized a protest in Mysuru demanding the Govt. of India to permit to conduct of backward castes census. In his address K.S. Shivaram informed that the caste-based census is important in order to reach out the government facilities for the establishment of an equal society. “The British had conducted caste-based census (1931), after that, it has not been conducted. In the present time, the backward caste people need to obtain their rights. Thus it will help them to join the mainstream society,” he explained.
Keywords: Caste based census/ Backward castes/ social justice/ K.S. Shivaram