ನವದೆಹಲಿ, ಜುಲೈ 19, 2022 (www.justkannada.in): ಕೇಂದ್ರ ಹಣಕಾಸು ಸಚಿವಾಲಯವು ಮಂಗಳವಾರದಂದು, ಬಿಡಿಯಾಗಿ ಮಾರಾಟ ಮಾಡುವ ಹಾಗೂ ಪೂರ್ವಪ್ಯಾಕ್ ಮಾಡಿರದ ಅಥವಾ ಮುಂಚಿತವಾಗಿ ಲೇಬಲ್ ಮಾಡಿರದಂತಹ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿಯನ್ನು ತೆಗೆದುಹಾಕಿದೆ.
ಸರಣಿ ಟ್ವೀಟ್ ಗಳ ಮೂಲಕ ಹಣಕಾಸು ಸಚಿವಾಲಯವು ನಾನ್-ಬ್ರ್ಯಾಂಡೆಡ್/ ಲೇಬೆಲ್ಡ್ ಬೇಳೆಗಳು, ಹಿಟ್ಟುಗಳು ಹಾಗೂ ಮೊಸರು/ಲಸ್ಸಿಗೆ ಜಿಎಸ್ ಟಿ ವಿನಾಯಿತಿ ನೀಡಿರುವುದಾಗಿ ತಿಳಿಸಿದೆ. ಈ ಪಟ್ಟಿಯಲ್ಲಿ ಓಟ್ಸ್, ಗೋಧಿ, ಗೋಧಿನುಚ್ಚು ಹಾಗೂ ಜೋಳ ಇವುಗಳೂ ಸೇರಿವೆ.
“ಇದು ಜಿಎಸ್‌ಟಿ ಕೌನ್ಸಿಲ್ ನಲ್ಲಿ ತೆಗೆದುಕೊಂಡಂತಹ ಅವಿರೋಧ ನಿರ್ಣಯವಾಗಿದೆ. ಜೂನ್ ೨೮, ೨೦೨೨ರಂದು ಚಂಡೀಘಡದಲ್ಲಿ ನಡೆದಂತಹ ೪೭ನೇ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವಾಗ ದರ ಕ್ರಮಬದ್ಧಗೊಳಿಸುವಿಕೆಯ ಎಲ್ಲಾ ರಾಜ್ಯಗಳ ಸಚಿವರ ಗುಂಪು ಹಾಜರಿತ್ತು,” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
Key words: Central Government –exempted- essential items – GST