ಬೆಂಗಳೂರು,ಅ,3,2019(www.justkannada.in): ಭಾರಿ ಮಳೆ, ಪ್ರವಾಹದಿಂದಾಗಿ ನೆಲೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ತಡಮಾಡುತ್ತಿರುವುದಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ನೆರೆ ಪರಿಹಾರ ವಿಚಾರದಲ್ಲಿ ನಮ್ಮಿಂದ ಸಾಕಷ್ಟು ತಡವಾಗಿದೆ. ಇದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇಷ್ಟೊತ್ತಿಗೆ ಪರಿಹಾರ ಬರಬೇಕಿತ್ತು. ಕೇಂದ್ರದಿಂದ ನೆರೆ ಪರಿಹಾರ ವಿಳಂಬವಾಗುತ್ತಿರುವುದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ನುಡಿದರು.
ಹಾಗೆಯೇ ನಮಗೆ ಬಡವರು ಪ್ರವಾಹ ಸಂತ್ರಸ್ತರ ಕಷ್ಟ ಮುಖ್ಯ. ಕೇಂದ್ರ ಸರ್ಕಾರಕ್ಕೆ ನಾವು 39 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಮೊದಲು ಕೇಂದ್ರದಿಂದ ಪರಿಹಾರ ಬರಬೇಕು.ಅಮೇಲೆ ಯಾರು ಬೇಕಾದರೂ ಹೇಗೆ ಬೇಕಾದ್ರೂ ಮಾತನಾಡಿಕೊಳ್ಳಲಿ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
Key words: central government- flood relief- delay-accept- minister – shriramulu