ನವದೆಹಲಿ,ಅಕ್ಟೋಬರ್,18,2022(www.justkannada.in): ಗೋಧಿ ಮತ್ತು ಬಾರ್ಲಿ ಸೇರಿದಂತೆ ಆರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ.
2023-24 ರ ಮಾರ್ಕೆಟಿಂಗ್ ಋತುವಿಗಾಗಿ ಎಲ್ಲಾ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಕೇಂದ್ರ ಸಂಪುಟ ಅನುಮೋದಿಸಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ , ಪ್ರತಿ ಕ್ವಿಂಟಾಲ್ ಗೆ 500 ರೂ.ಗೆ ಬೇಳೆ (ಮಸೂರ್) ಗೆ ಎಂಎಸ್‌ಪಿಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ.
Key words: central government – increased –MSP- six crops