ಕೇಂದ್ರ ಸರ್ಕಾರದ ಸೂಚನೆ ಮೇರೆಗೆ “ಅಜಾದಿ ಕ ಅಮೃತ್ ಮಹೋತ್ಸವ್” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,12,2021(www.justkannada.in) : ಗಾಂಧೀಜಿಯವರು ಅಹಿಂಸಾತ್ಮಕ ಹೋರಾಟದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟಿರುವುದು ಗಮನಾರ್ಹವಾಗಿದ್ದು, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಸತ್ಯ, ಅಹಿಂಸೆ ಪರಿಕಲ್ಪನೆಗಳು ಪರಿಹಾರವಾಗಲ್ಲವು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

Central-government-NOTE-Above-Azadi Ka Amrit Mahotsav-Chancellor-Prof.G.Hemant Kumar

75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ “ಅಜಾದಿ ಕ ಅಮೃತ್ ಮಹೋತ್ಸವ್” ಕಾರ್ಯಕ್ರಮ

ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಾನಸಗಂಗೋತ್ರಿಯ ಗಾಂಧಿ ಭವನ ಆವರಣದಲ್ಲಿ  75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ “ಅಜಾದಿ ಕ ಅಮೃತ್ ಮಹೋತ್ಸವ್” ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರ ಜೀವ ಚೈತನ್ಯದ ಚಿಂತನೆಗಳು ಜಗತ್ತಿಗೆ ಮಾರ್ಗದರ್ಶಕ

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ “ಅಜಾದಿ ಕ ಅಮೃತ್ ಮಹೋತ್ಸವ್” ದಂಡಿಯಾತ್ರೆ ನೆನಪಿನಾರ್ಥವಾಗಿ ಔಪಚಾರಿಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಗಾಂಧೀಜಿ ಅವರ ಜೀವ ಚೈತನ್ಯದ ಚಿಂತನೆಗಳು ಜಗತ್ತಿಗೆ ಮಾರ್ಗದರ್ಶಕವಾಗಿದೆ. ಸಾರ್ಥಕ ಬದುಕಿನ ಹೋರಾಟಕ್ಕೆ ಪ್ರೇರಣೆಯಾಗಿದೆ. ಅವರ ಚಿಂತನೆ ಅರಿಯಬೇಕಿದೆ. ಸರ್ವಕಾಲಿಕ ಸತ್ಯವನ್ನು ಅನುಸಂಧಾನಗೊಳಿಸಿದ್ದಾರೆ ಎಂದರು.

ಗಾಂಧೀಜಿ ಅವರ ಅಚಲ ನಂಬಿಕೆಯ ಹೋರಾಟದಿಂದ ಎಲ್ಲವೂ ಯಶಸ್ವಿ

ಗಾಂಧೀಜಿಯವರು ಪ್ರತಿ ಹೋರಾಟದಲ್ಲಿ ಸತ್ಯ, ಅಹಿಂಸೆಯನ್ನು ಅಳವಡಿಸಿದ್ದು, ಜೀವಂತ ದಂತ ಕಥೆಯಾಗಿದ್ದಾರೆ. ಬಾಪು, ರಾಷ್ಟ್ರಪಿತ ಎಂದು ಜನಮಾನಸದಲ್ಲಿ ನೆಲೆಸಿದ್ದಾರೆ. ರಾಷ್ಟ್ರೀಯ ಚಳುವಳಿ ಅದ್ವೀತಿಯ ನಾಯಕರಾಗಿದ್ದು, ಅವರ ಅಚಲ ನಂಬಿಕೆಯ ಹೋರಾಟದಿಂದ ಎಲ್ಲವೂ ಯಶಸ್ವಿಯಾಗಿದೆ ಎಂದರು ಹೇಳಿದರು.

ಒಂದು ಹಿಡಿ ಉಪ್ಪು ಬ್ರಿಟಿಷ್ ಸರ್ಕಾರ ನಡುಗಿಸಿದ ಘಟನೆCentral-government-NOTE-Above-Azadi Ka Amrit Mahotsav-Chancellor-Prof.G.Hemant Kumar

ಗಾಂಧೀಜಿಯವರ ಹೋರಾಟಗಳಲ್ಲಿ ಉಪ್ಪಿನ ಸತ್ಯಾಗ್ರಹ, ದಂಡಿಯಾತ್ರೆಯು ಪ್ರಮುಖವಾಗಿದ್ದು, ಒಂದು ಹಿಡಿ ಉಪ್ಪು ಬ್ರಿಟಿಷ್ ಸರ್ಕಾರ ನಡುಗಿಸಿದ ಘಟನೆಯಾಗಿದೆ. ಈ ಹೋರಾಟದ ಬಳಿಕ ಬ್ರಿಟಿಷ್ ವಸಾಹತು ಶಾಯಿ ಕೊನೆಗೊಳಿಸಬೇಕು ಎಂಬ ಕೂಗು ಹೆಚ್ಚಾಯಿತು. ಉಪ್ಪಿನ ಕಾನೂನು, ಏಕಸ್ವಾಮ್ಯದ ಒಡೆತನ, ಉಪ್ಪಿನ ಮೇಲೆ ವಿಧಿಸಿದ ದರ ಭಾರತೀಯರನ್ನು ರೊಚ್ಚಿಗೆಬ್ಬಿಸಿತು. ಈ ಸಂದರ್ಭ ಗಾಂಧಿ ಪೂರ್ಣ ಸ್ವಾರಾಜ್ಯದ ಪರಿಕಲ್ಪನೆ ಯನ್ನು ಬಲಗೊಳಿಸಿದರು. ದಂಡಿಯಾತ್ರೆ ಆರಂಭಿಸಿದರು ಎಂದು ವಿವರಿಸಿದರು.

ಇದು ಸ್ವಾತಂತ್ರ್ಯ ಚಳುವಳಿಯ ಮಹತ್ವ ಘಟನೆಯಾಗಿದ್ದು, ಸಬರಮತಿ ಆಶ್ರಮದಿಂದ ದಂಡಿಯಾತ್ರೆ ಆರಂಭಿಸಿದರು. ದಂಡಿ ಸಮುದ್ರದ ದಂಡೆಯ ಮೇಲೆ ಉಪ್ಪು ತಯಾರಿಸಿ, ಹರಾಜು ಹಾಕಿದರು. ಇದು ಐತಿಹಾಸಿಕ ದಿನವಾಗಿದೆ ಎಂದು ತಿಳಿಸಿದರು.

ಉಪ್ಪಿನ ಸತ್ಯಾಗ್ರಹದ ಮೂಲಕ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದರು

ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌.ಶಿವಪ್ಪ ಮಾತನಾಡಿ, ದಂಡಿಯಾತ್ರೆಯು ಬ್ರಿಟಿಷರಿಗೆ ನೀವು ಹೇಳುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಸಾರಿದಂತಹ ಹೋರಾಟವಾಗಿದೆ. ಉಪ್ಪಿನ ಸತ್ಯಾಗ್ರಹದ ಮೂಲಕ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದರು ಎಂದು ಸ್ಮರಿಸಿದರು.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇದೇ ಮೊದಲ ಬಾರಿಗೆ ವಿವಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ವರ್ಷಗಳಲ್ಲಿ ನಿರಂತರವಾಗಿ ಆಚರಿಸಲಾಗುವುದು. ಗಾಂಧಿ ಭವನ ಆವರಣದಲ್ಲಿ ಉತ್ತಮ ಪರಿಸರವಿದ್ದು, ವಿದ್ಯಾರ್ಥಿಗಳು ಓದುವುದಕ್ಕೆ ಅನುಕೂಲವಾಗುವಂತೆ ಕಲ್ಲು ಬೆಂಚ್ ಗಳ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕುಲಪತಿಗಳಿಗೆ ಮನವಿ ಮಾಡಿದರು.ಮೈಸೂರು ವಿವಿ ವಾಣಿಜ್ಯಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಯಶವಂತ ಡೋಂಗ್ರೆ ಅವರು “ಅಜಾದಿ ಕ ಅಮೃತ್ ಮಹೋತ್ಸವ್” ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ಕೆ.ಟಿ.ವೀರಪ್ಪ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ್, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಎನ್ ಎಸ್ ಎಸ್ ಇಐಟಿ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ENGLISH SUMMARY…

“Gandhiji’s thoughts can be solutions for any problem on this earth”: MoU VC
Mysuru, Mar. 12, 2021 (www.justkannada.in): “We got our independence by Mahatma Gandhiji through his fight for independence based on non-violence and satyagraha. Gandhiji’s truth and non-violence thoughts can become solutions to all the problems on this earth,” opined Prof. G. Hemanth Kumar, Vice-Chancellor, University of Mysore.
He inaugurated a program titled, “Azadi ka Amruth Mahotsav,” organized to commemorate the Dandi Yatra. In his address, he said that Gandhi’s life-inspiring thoughts are like a guide for the world today. Everyone should try to understand his thoughts and follow his principles.Central-government-NOTE-Above-Azadi Ka Amrit Mahotsav-Chancellor-Prof.G.Hemant Kumar
Prof. R. Shivappa, Registrar, the University of Mysore in his address mentioned that the ‘Dadi Yatra’ was a struggle to tell the British that we won’t agree with what they say. ‘Mahatma Gandhi blew the horn for the struggle for Indian independence through the salt satyagraha,” he added.
Senior Gandhian K.T. Veerappa, NSS Program Coordinator Dr. M.B. Suresh, Prof. M.S. Shekar, Director, Gandhi Bhavana, along with the NSS-IET training program participants were present on the occasion.
Keywords: Dandi Yatra/ Salt Satyagraha/ Prof. G. Hemanth Kumar/ University of Mysore/ Azadi ka Amruth Mahotsav

key words : Central-government-NOTE-Above-Azadi Ka Amrit Mahotsav-Chancellor-Prof.G.Hemant Kumar