ಗೋಧಿ ರಫ್ತು ನಿಷೇಧಿಸಿ  ಕೇಂದ್ರ ಸರ್ಕಾರ ಆದೇಶ.

ನವದೆಹಲಿ,ಮೇ,14,2022(www.justkannada.in): ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಪ್ತು ಮಾಡದಂತೆ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಭಾರತದ ಗೋಧಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ನಡುವೆ  ಆಂತರಿಕ ಬಳಕೆಗೆ ತೊಂದರೆಯಾಗದಂತೆ ಗೋಧಿ ರಫ್ತು ನಿಷೇಧಿಸಿ ಸರ್ಕಾರ ಆದೇಶಿಸಿದೆ. ಜಾಗತಿಕವಾಗಿ ಗೋಧಿ ಬೆಲೆಯಲ್ಲಿ ಏರಿಕೆಯಾದ ನಂತರ ದೇಶದ ಗೋಧಿಯ ರಫ್ತು ನಿಷೇಧಿಸುವ ರಫ್ತು ನೀತಿಯನ್ನು ಕೇಂದ್ರ ತಿದ್ದುಪಡಿ ಮಾಡಿದೆ.

ಹೆಚ್ಚಿನ ಪ್ರೊಟೀನ್ ಡುರಮ್ ಮತ್ತು ಸಾಮಾನ್ಯ ಮೃದುವಾದ ಬ್ರೆಡ್ ಪ್ರಭೇದಗಳು ಸೇರಿದಂತೆ ಎಲ್ಲಾ ಗೋಧಿಗಳನ್ನು ರಫ್ತು  ಮಾಡದಂತೆ ತಕ್ಷಣವೇ ಜಾರಿಗೆ ಬರುವಂತೆ ಆದೇಶ ಮಾಡಲಾಗಿದೆ.

ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ಸರ್ಕಾರವು “ನಿಷೇಧಿತ” ವರ್ಗದ ಅಡಿಯಲ್ಲಿ ಗೋಧಿ ರಫ್ತನ್ನು ತಂದಿದೆ.

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಶುಕ್ರವಾರ ಸಂಜೆ ಈ ಬಗ್ಗೆ ಆದೇಶ ಹೊರಡಿಸಿದೆ. ಮೇ ಅಥವಾ ಅದಕ್ಕೂ ಮೊದಲು ಐಎಲ್‌ಒಸಿ ಅಥವಾ ರಫ್ತಿನ ಒಪ್ಪಂದ ನಡೆದಿದ್ದರೆ ಮಾತ್ರ ಮೇ 13ರ ಒಳಗೆ ರಫ್ತಿಗೆ ಅವಕಾಶ ನೀಡಲಾಗುವುದು. ಇಲ್ಲವಾದರೆ ಗೋಧಿ ರಫ್ತಿಗೆ ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

Key words: Central-government-order- ban -wheat -exports

ENGLISH SUMMARY…

Union Govt. issues order prohibiting wheat exports
New Delhi, May 14, 2022 (www.justkannada.in): The Government of India has issued orders prohibiting export of wheat.
The wheat produced in India has great demand in many other countries. However, the Government of India has issued orders prohibiting wheat exports in order to prevent internal scarcity. The orders have been issued following increase in prices of wheat at the global level.
Accordingly, export of all varieties of wheat, including the Durram that contains higher protein content and wheat variety that is used to prepare bread has been prohibited.
The Govt. of India has included wheat under the ‘Prohibited’ category as a measure of controlling inflation.
The Office of the Directorate General of Foreign trade (DGFT) has issued the orders on Friday evening. Wheat export will be allowed only if an agreement is made before May or an ILOC agreement is made before May.
Keywords: Government of India/ Wheat export/ prohibited