ಕೊರೊನಾ ಝೋನ್’ಗಳನ್ನು ಪರಿಷ್ಕರಿಸಿ ಕೇಂದ್ರ ಸರಕಾರದ ಆದೇಶ

ನವದೆಹಲಿ, ಮೇ 01, 2020 (www.justkannada.in): ದಿನೇದಿನೇಸೋಂಕುಪೀಡಿತರಸಂಖ್ಯೆಹೆಚ್ಚಳವಾಗುತ್ತಿದೆ. ಏತನ್ಮಧ್ಯೆ, ದೇಶದಲ್ಲಿಸೋಂಕಿತರಸಂಖ್ಯೆ, 35,043ಕ್ಕೆಏರಿಕೆಯಾಗಿದೆ.

ಈ ನಡುವೆಯೇ ಕೇಂದ್ರ ಸರ್ಕಾರ ಕೊರೊನಾ ಸೋಂಕು ಕುರಿತಾದ ಝೋನ್ ಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ. ಈ ಪೈಕಿ ದೇಶದ 130 ಜಿಲ್ಲೆಗಳನ್ನು ರೆಡ್ ಝೋನ್, 284 ಆರೆಂಜ್ ಝೋನ್, 319 ಗ್ರೀನ್ ಝೋನ್ ಗಳೆಂದು ಘೋಷಿಸಲಾಗಿದೆ.

ಕೇಂದ್ರ ಸರ್ಕಾರ ಇಂದು ಪ್ರಕಟಿಸಿರುವ ಪರಿಷ್ಕೃತ ಪಟ್ಟಿಯಲ್ಲಿ ದೇಶದ 130 ಜಿಲ್ಲೆಗಳು ರೆಡ್ ಝೋನ್ ನಲ್ಲಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 19 ಜಿಲ್ಲೆಗಳು ರೆಡ್ ಝೋನ್ ಪಟ್ಟಿಯಲ್ಲಿವೆ.

ಇನ್ನು ಮಹಾರಾಷ್ಟ್ರದಲ್ಲಿ 14, ತಮಿಳುನಾಡಿನಲ್ಲಿ 12, ದೆಹಲಿಯಲ್ಲಿ 11 ಹಾಗೂ ಕರ್ನಾಟಕದಲ್ಲಿ 3 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ. ಇನ್ನು ಕರ್ನಾಟಕದಲ್ಲಿ ಕಿತ್ತಲೆ ವಲಯ 13 , ಹಸಿರು ವಲಯ 14 ಎಂದು ಪರಿಷ್ಕೃತ ಪಟ್ಟಿಯಲ್ಲಿ ತಿಳಿಸಲಾಗಿದೆ.