ಜ.26ರ  ‘ಟ್ರ್ಯಾಕ್ಟರ್‌ ರ‍್ಯಾಲಿ’ಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ಧ ಅರ್ಜಿ ಹಿಂಪಡೆದ ಕೇಂದ್ರ ಸರ್ಕಾರ…

ನವದೆಹಲಿ,ಜನವರಿ,20,2021(www.justkannada.in): ಜ.26ರ  ‘ಟ್ರ್ಯಾಕ್ಟರ್‌ ರ‍್ಯಾಲಿ‘ಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ‘ಗಣರಾಜ್ಯೋತ್ಸವದಂದು ರೈತ ಸಂಘಟನೆ ಕರೆ ನೀಡಿರುವ ಟ್ರ್ಯಾಕ್ಟರ್‌ ರ‍್ಯಾಲಿ ವಿಚಾರ ಪೊಲೀಸರು ಇತ್ಯರ್ಥಪಡಿಸಬೇಕು‘ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಹೇಳಿತು.jk

ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಪೀಠ, ‘ಈ ರ‍್ಯಾಲಿ ವಿಷಯಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ನಿರ್ದೇಶನ ನೀಡುವುದಿಲ್ಲ. ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದೆ. ನೀವು ಅರ್ಜಿಯನ್ನು ಹಿಂದೆತೆಗೆದುಕೊಳ್ಳಲು ಅವಕಾಶ ನೀಡುತ್ತೇವೆ‘ ಎಂದು ತಿಳಿಸಿತು. ಬಳಿಕ  ರ‍್ಯಾಲಿಗೆ ತಡೆಯಾಜ್ಞೆ ನೀಡುವಂತೆ ಕೋರಿ ದೆಹಲಿ ಪೊಲೀಸರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.Central Government - withdrawn -petitions - injunction -Tractor Rally-stay-supreme court

 

ENGLISH SUMMARY….

Govt. of India withdraws its appeal submitted to SC seeking stay on ‘tractor rally’ on Jan. 26
New Delhi, Jan. 20, 2021 (www.justkannada.in): The Government of India which had submitted an appeal in the Hon’ble Supreme Court requesting a stay order for the ‘Tractor Rally’ to be held on January 26, has withdrawn its application. The Supreme Court bench comprising Chief Justice S.A. Bobade and Justice S. Bopanna and V. Ramasubramanian has ordered police intervention in the call for a tractor rally given by the farmers’ organisations on Republic Day.
The SC Bench conduct the trial through video conferencing. It stated that “We won’t give any directions regarding the rally. This is related to the Police Department. We allow you to withdraw the appeal.” The Govt. of India withdrew its appeal submitted to the SC through the police requesting a stay order to the rally.
Keywords: Tractor rally/ Govt. of India/ appeal withdraw/

Key words: Central Government – withdrawn -petitions – injunction -Tractor Rally-stay-supreme court