ನವದೆಹಲಿ,ಜನವರಿ,9,2021(www.justkannada.in): ದೇಶದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ವಿತರಣೆಗೆ ಡೇಟ್ ಫಿಕ್ಸ್ ಮಾಡಿದೆ. ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲು ನಿರ್ಧರಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಒಟ್ಟು 30 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲು ಮುಂದಾಗಿದೆ. ನಂತರ 50 ವರ್ಷ ಮೇಲ್ಪಟ್ಟವರು ಮತ್ತು ರೋಗ ಲಕ್ಷಣಗಳನ್ನ ಹೊಂದಿರುವಂತಹ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಸಿಎಂಗಳ ಜತೆ ಸಂವಾದ ನಡೆಸಲಿದ್ದು ಸಂವಾದ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
Key words: Central government’s- decision -distribute –corona s vaccine – India-jan 16