ಮೈಸೂರು,ಡಿಸೆಂಬರ್,13,2020(www.justkannada.in) : ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ಮಾಡುತ್ತಿದೆ. ಸ್ವಾತಂತ್ರ್ಯದ ನಂತರ ಈ ರೀತಿಯ ಹೊಲಸು ನಾವು ನೋಡಿರಲಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.
ಕೊರೆವ ಚಳಿಯಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಆದರು ರೈತರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ವಹಿಸಿಲ್ಲ. ರೈತರ ಬಗ್ಗೆ ಸ್ವಲ್ಪವಾದರು ಕಾಳಜಿ ಇದ್ದರೆ ಖಾಸಗೀಕರಣ ಮಾಡಬೇಡಿ ಎಂದಿದ್ದಾರೆ.
ಕನಿಷ್ಠ ರೈತರ ಜೊತೆ ಮಾತುಕತೆಗೆ ಮುಂದಾಗಿಲ್ಲ. ಮೋದಿ ಸಾರ್ವಜನಿಕ ಧನಿ ದಮನವನ್ನ ಮಾಡುತ್ತ ಕಾರ್ಪೆಟ್ ಸೆಕ್ಟರ್ ಹದ ಮಾಡುತ್ತಿದೆ. ನಿಮ್ಮ ಈ ಧೋರಣೆಯನ್ನ ರೈತ ಸಮುದಾಯ ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ನೀವೂ ಮಾಡಿದ 7ವರ್ಷದ ಕೆಲಸವನ್ನ ಪ್ರತಿಯೊಂದು ಮನೆಗೆ ತಲುಪಿಸುತ್ತೇವೆ. ಇದರಲ್ಲಿ ಸಾರ್ವಜನಿಕ ಜೀವನ ಖಾಸಗೀಕರಣ ಮಾಡಿರುವುದನ್ನ ತಿಳಿಸುತ್ತೇವೆ. ಡಿ.16ರಿಂದ 30ರ ವರೆಗೆ ದೆಹಲಿ ಚಲೋ ಚಳುವಳಿ ಆರಂಭಿಸುತ್ತೇವೆ. ಬೆಂಗಳೂರಿನಲ್ಲಿ ಇದಕ್ಕಾಗಿ ಎಲ್ಲರನ್ನು ಒಗ್ಗೂಡಿಸುತ್ತೇವೆ. ರೈತ, ದಲಿತ, ಐಕ್ಯ ಹೋರಾಟ ಸಮಿತಿಯಿಂದ ಈ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
key words : Central-government-democracy-Doing-Anti-Activity-Badagalpur Nagendra