“ಕೇಂದ್ರ ಮತ್ತು ರಾಜ್ಯದಲ್ಲಿ ಜಾತಿ ಪೋಷಿಸುವ ಸರಕಾರಗಳಿಂದ ಆಡಳಿತ” : ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆಕ್ರೋಶ

ಮೈಸೂರು,ಫೆಬ್ರವರಿ,20,2021(www.justkannada.in) :  ಕೇಂದ್ರ ಮತ್ತು ರಾಜ್ಯದಲ್ಲಿ ಜಾತ್ಯಾತೀತ ಸರಕಾರಗಳು ಇಲ್ಲ. ಜಾತಿ ಪೋಷಿಸುವ ಸರಕಾರಗಳು ಆಡಳಿತ ನಡೆಸುತ್ತಿವೆ. ಈ ಸರಕಾರಗಳು ಜಾತಿ ವ್ಯವಸ್ಥೆಗಾಗಿ ದುಡಿಯುತ್ತಿದ್ದು, ಜಾತಿ ವ್ಯವಸ್ಥೆ ಬೆಳೆಸಲು, ಪೋಷಸಿಲು, ಸದೃಢಗೊಳಿಸು ಕಾರ್ಯಮಾಡುತ್ತಿವೆ ಎಂದು ಉಚ್ಚ ನ್ಯಾಯಾಲಯ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆಕ್ರೋಶವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಅಂತರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ “ಸಮಕಾಲೀನ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಚರ್ಚೆಗಳು” ವಿಷಯ ಕುರಿತು ಅವರು ಮಾತನಾಡಿದರು.

ಮಂಡಳಿಗಳ ರಚನೆ ಮಾಡಿ, ರಾಜ್ಯದ ಬೊಕ್ಕಸದಿಂದ ಹಣ ಹಂಚಿಕೆ

ಜಾತಿ ಪೋಷಿಸುವ ಕಾರ್ಯವನ್ನು ಕರ್ನಾಟಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಚನ್ನಾಗಿ ಮಾಡುತ್ತಿದ್ದಾರೆ. 16 ಜಾತಿ ಅಭಿವೃದ್ಧಿ ಮಂಡಳಿ ರಚನೆ ಮಾಡಿ, ರಾಜ್ಯದ ಬೊಕ್ಕಸದಿಂದ ಹಣವನ್ನು ಹೇರಳವಾಗಿ ನೀಡುತ್ತಿದ್ದಾರೆ ಎಂದು ದೂರಿದರು.

ಸಚಿವರುಗಳು ಈ ಜಾತಿ ಚಳುವಳಿಗಳ ಮುಂಚೂಣಿ

ಒಂದೊಂದು ಜಾತಿಯ ಮಠಕ್ಕೆ ಒಂದಿಷ್ಟು ದುಡ್ಡು ಸುರಿದಿದ್ದು, ಅದರ ಫಲವಾಗಿ ಇಂದು ಜಾತಿ ಚಳುವಳಿ ನಡೆಯುತಿದೆ. ಜಾತ್ಯಾತೀತ ಸರ್ಕಾರವಿದ್ದರೆ ಈ ರೀತಿಯ ಚಳುವಳಿ ನಡೆಯುತ್ತಿರಲಿಲ್ಲ. ಸಚಿವರುಗಳು ಈ ಜಾತಿ ಚಳುವಳಿಗಳ ಮುಂಚೂಣಿಯಲ್ಲಿದ್ದು, ಯಾರ ವಿರುದ್ಧವಾಗಿ ಇವರು ಹೋರಾಟ ಮಾಡುತ್ತಿದ್ದಾರೆ. ಇದು ಸರ್ಕಾರ ಕೃಪಪೋಷಿತ ಚಳುವಳಿಗಳಾಗಿವೆ ಎಂದು ಟೀಕಿಸಿದರು.

Central,state,Nurturing,caste,governments,Administration,Senior Advocate,Prof.Raviwarmakumar,Outrage

ಕಾವಿ ಬಟ್ಟೆ ಧರಿಸಿ ರಾಜಕೀಯ ಮಾಡಿದ್ದರೆ ಸಂನ್ಯಾಸತ್ವಕ್ಕೆ ಕಳಂಕ

ಸ್ವಾಮೀಜಿಗಳು, ಸಂನ್ಯಾಸಿಗಳಿಗೆ ರಾಜಕೀಯ ಏಕೆ ಬೇಕು. ಕಾವಿ ಬಟ್ಟೆ ಹಾಕಿದ ಸ್ವಾಮೀಜಿ ರಾಜಕೀಯ ಮಾಡಿದ್ದರೆ ಸಂನ್ಯಾಸತ್ವಕ್ಕೆ ಕಳಂಕ. ಅಂತಹವರಿಗೆ ಕಾವಿ ಬಟ್ಟೆ ಹಾಕುವ ಅರ್ಹತೆಯಿಲ್ಲ. ಇದನ್ನು ಯಾರು ಪ್ರಶ್ನಿಸುವುದಿಲ್ಲ. ಮಠಗಳು ಕಲೆಕ್ಷನ್ ಸೆಂಟರ್ ಗಳಾಗಿದ್ದು, ಇಂಥಹವರನ್ನೆ ಮಂತ್ರಿಗಳನ್ನಾಗಿ ಮಾಡಿ ಎಂದು ಹೇಳುವಂತ್ತಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಸರ್ಕಾರವೇ ಜಾತಿಯತೇಯ ಪರಾಕಾಷ್ಠೆ ಚಳುವಳಿಗೆ ಬೆಂಬಲ

ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಹಾಳಾಗಿದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ನಡುವೆ ಬಲಾಢ್ಯರು ಬಲಾಢ್ಯರಾಗುತ್ತಲೆ ಇದ್ದಾರೆ. ಇದನ್ನು ಮರೆಮಾಚುವ ಉದ್ದೇಶದಿಂದ ಸರ್ಕಾರವೇ ಜಾತಿಯತೇಯ ಪರಾಕಾಷ್ಠೆ ಚಳುವಳಿಗೆ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದರು.

ಯಾರು ಜಾತಿ ಮೀರಿ ನ್ಯಾಯದ ಬಗ್ಗೆ ಪ್ರಶ್ನಿಸುವುದಿಲ್ಲ

ಮೀಸಲಾತಿ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಮಿತಿಗಳು ವರದಿಗಳನ್ನು ಸಲ್ಲಿಸಿವೆ. ಆದರೆ, ಯಾವುದನ್ನೂ ಜಾರಿಗೊಳಿಸಿಲ್ಲ. ಯಾರು ಜಾತಿ ಮೀರಿ ನ್ಯಾಯದ ಬಗ್ಗೆ ಪ್ರಶ್ನಿಸುವುದಿಲ್ಲ. ತಮ್ಮ ಜಾತಿಯ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅವರ ಜಾತಿಯವರನ್ನೇ ಪ್ರೋತ್ಸಾಹಿಸುತ್ತಾರೆ ಇದು ವಿಪರ್ಯಾಸ ಎಂದು ವ್ಯಂಗ್ಯವಾಗಿ ನುಡಿದರು.

ಜಾತಿ, ಜಾತಿ ಗಳು ಕಿತ್ತಾಡುವಂತಹ ಸಂದರ್ಭದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಪವಾಡದಂತೆ ಕೆಲಸ ಮಾಡಿ‌ ಜಡವಾಗಿದ್ದ ಸಮಾಜಕ್ಕೆ ಚಲನೆ ನೀಡಿದೆ. ಚಲನ ಶೀಲತೆ ಕಳೆದುಕೊಂಡ ವರ್ಗವೇ ಜಾತಿ. ಚಲನೆ ಕಂಡು ಕೊಂಡ ಜಾತಿಯೇ ವರ್ಗವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಪೀಠ ಅಭಿವೃದ್ಧಿ ಅಧ್ಯಯನ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಕೆ.ಎಸ್‌‌.ಲಿಂಗಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ENGLISH SUMMARY…

Communals are ruling us both in State and Centre: Senior advocate Prof. Ravivarmakumar
Mysuru, Feb. 20, 2021 (www.justkannada.in): “We don’t have secular governments both in the State and at the center. We are ruled by communals. They are working for caste system and are trying to strengthen caste system,” opined Prof. Ravivarmakumar, Senior Advocate of the High Court.
He participated in a lecture program held at the Vishwaganani Auditorium in Manasagangotri today.
Chief Minister B.S. Yedyurappa is doing caste protecting and developing works very nicely. He has been generous to provide enough funds by setting up 16 caste development boards, he alleged.
“Many committees have submitted reports on reservation till now. But none of them have been implemented. No one questions beyond caste. Everyone will defend their caste. They will encourage only their caste people, which is very unfortunate,” he added.
Prof. K.S. Lingappa, visiting Professor, D. Devaraj Urs Bench Development Institute, and Prof. J. Somashekar, Director, Extension Centre were present.
Keywords: Prof. Ravivarmakumar/ caste/ communal governments/ secular

key words : Central-state-Nurturing-caste-governments-Administration-Senior Advocate-Prof.Raviwarmakumar-Outrage