ನವದೆಹಲಿ,ಜನವರಿ,11,2024(www.justkannada.in): ಲೋಕಸಭೆ ಚುನಾವಣೆ ಹಿನ್ನಲೆ ಈ ಬಾರಿ ಫೆಬ್ರವರಿ 1 ರಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿಯ ಸರ್ಕಾರದ ಕೊನೆಯ ಬಜೆಟ್ ಆಗಲಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
ಚುನಾವಣೆಗೆ ಮುಂಚಿನ ಬಜೆಟ್ ಆಗಿರುವ ಇದು ಮಧ್ಯಂತರ ಬಜೆಟ್ ಮಾತ್ರವೇ ಆಗಿರುತ್ತದೆ. ನಿಯಮದ ಪ್ರಕಾರ ಮತದಾರರನ್ನು ಸೆಳೆಯುವಂತಹ ಯಾವ ಯೋಜನೆಗಳನ್ನೂ ಬಜೆಟ್ನಲ್ಲಿ ಪ್ರಕಟಿಸುವಂತಿಲ್ಲ. ಆರ್ಥಿಕ ಸಮೀಕ್ಷೆಯ ವರದಿಯನ್ನೂ ಬಿಡುಗಡೆ ಮಾಡುವಂತಿಲ್ಲ.
ಇದಕ್ಕೂ ಮುನ್ನ ಜನವರಿ 31 ರಂದು ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Centre- Interim Budget – 1st Feb.