ಶಿವಮೊಗ್ಗ,ಏಪ್ರಿಲ್,18,2025 (www.justkannada.in): ಜನಿವಾರ ಹಾಕಿ ಬಂದಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಘಟನೆ ಶಿವಮೊಗ್ಗ, ಬೀದರ್ ನಲ್ಲಿ ನಡೆದಿದೆ.
ಜನಿವಾರ ಹಾಕಿದ್ದಕ್ಕೆ ಸಿಬ್ಬಂದಿ ಪರೀಕ್ಷೆಗೆ ಅವಕಾಶ ಕೊಡದೇ ಇರುವ ಘಟನೆ ಶಿವಮೊಗ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ನಡೆದಿದೆ. ಬೀದರ್ ನ ಸಾಯಿಸ್ಪೂರ್ತಿ ಕಾಲೇಜಿನಲ್ಲಿ ಈ ಘಟನೆ ನೆದಿದೆ.
ಪರೀಕ್ಷಾ ಸಿಬ್ಬಂದಿ ವರ್ತನೆಗೆ ಬ್ರಾಹ್ಮಣ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. ಈ ಘಟನೆಯನ್ನ ಖಂಡಿಸಿ ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ದೂರು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಯಿಂದ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿಲ್ಲ. ವಿದ್ಯಾರ್ಥಿಗಳ ಜನವಾರ ತೆಗೆಸಿ ಧಾರ್ಮಿಕತೆಗೆ ಧಕ್ಕೆ ತರಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬ್ರಾಹ್ಮಣ ಮಹಾಸಭಾ ದೂರು ನೀಡಿದೆ.
Key words: CET exam, Janivar, complaint, shimoga, DC