ಬೆಂಗಳೂರು,ಜುಲೈ,30,2022(www.justkannada.in): 2021-22ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಯುವಕರೇ ಮೇಲುಗೈ ಸಾಧಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ಸುದ್ಧಿಗೋಷ್ಠಿ ನಡೆಸಿ ಪ್ರಕಟಿಸಿದರು. ಪ್ರತಿ ವರ್ಷ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುತ್ತಿದ್ದರು. ಈ ಬಾರಿಯ ಸಿಇಟಿಯಲ್ಲಿ ಯುವಕರೇ ಮೇಲುಗೈ ಸಾಧಿಸಿದ್ದು, ಇಂಜಿನಿಯರಿಂಗ್ ಕೋರ್ಸ್ಗೆ 1,71,656 ರ್ಯಾಂಕ್, ಕೃಷಿ ಕೋರ್ಸ್ಗೆ 1,39,968 ರ್ಯಾಂಕ್, ಪಶುಸಂಗೋಪನೆ 1,42,2820
ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ.
ಎಂಜಿನಿಯರಿಂಗ್ ಕೋರ್ಸ್ ನಲ್ಲಿ ಯಲಹಂಕ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಅಪೂರ್ವ ಶೇ.97ರಷ್ಟು ಅಂಕ ಪಡೆದು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಹಾಗೆಯೇ ಸಿದ್ಧಾರ್ಥ ಸಿಂಗ್ ಶೇ.97 ರಷ್ಟು ಅಂಕ ಪಡೆದು 2ನೇ ರ್ಯಾಂಕ್ ಗಳಿಸಿದ್ದಾರೆ.
Key words: CET Result- 2021-22 –announce-minister-ashwath narayan