ಬೆಂಗಳೂರು,ಫೆಬ್ರವರಿ,26,2025 (www.justkannada.in): ಈಗಿನ ಆರೋಗ್ಯ ಸಚಿವರ ಆರೋಗ್ಯ ಸರಿಯಿಲ್ಲ. ಆರೋಗ್ಯ ಸಚಿವರಿಗೆ ಆರೋಗ್ಯ ಸಚಿವರಾಗಲು ಯೋಗ್ಯತೆಯೇ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶುಶ್ರೂಷಕರು ಪ್ರತಿಭಟನೆ ನಡೆಸುತ್ತಿದ್ದು ಸ್ಥಳಕ್ಕೆ ಭೇಟಿ ಕೊಟ್ಟು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈಗಿನ ಆರೋಗ್ಯ ಸಚಿವರಿಗೆ ಆರೋಗ್ಯ ಸರಿ ಇಲ್ಲ, ಅವರು ಇಲ್ಲಿ ಬಂದರೆ ನೀವು ಎಲ್ಲರೂ ಅವರಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಕೊಡಿ ಎಂದು ಲೇವಡಿ ಮಾಡಿದರು.
ಬಜೆಟ್ ಅಧಿವೇಶನ ಶುರುವಾಗಲಿದ್ದು ಅಧಿವೇಶನದಲ್ಲಿ ನಿಮ್ಮ ಸಮಸ್ಯೆ ಗಳ ಬಗ್ಗೆ ನಾನು ಹೋರಾಟ ಮಾಡುತ್ತೇನೆ. ಮುಖ್ಯಮಂತ್ರಿಗಳ ಜೊತೆಗೂ ನಾನು ಮಾತಾಡುತ್ತೇನೆ. ಆರೋಗ್ಯ ಸಚಿವರಿಗೆ ಆರೋಗ್ಯ ಸರಿ ಇದ್ದರೆ ನಾನು ಮಾತಾಡುತ್ತೇನೆ. ಇಷ್ಟೊತ್ತಿಗೆ ಆರೋಗ್ಯ ಸಚಿವರು ಇಲ್ಲಿಗೆ ಬರಬೇಕಿತ್ತು. ಯಾಕೆಂದರೆ ಅವರು ಇಲ್ಲಿನ ಕ್ಷೇತ್ರವರಾಗಿದ್ದಾರೆ ಎಂದು ಕಿಡಿಕಾರಿದರು.
Key words: health minister, Diniseh gundurao, Chalavadi Narayanaswamy