ಬೆಂಗಳೂರು, ನವೆಂಬರ್ 16, 2021 (www.justkannada.in): ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟ ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಿಸಿ ಪಾಟೀಲ್, 2016 ರಲ್ಲಿ ಹ್ಯಾಪಿ ನ್ಯೂ ಇಯರ್ ಎಂಬ ಸಿನಿಮಾ ನಿರ್ಮಾಣಮಾಡಿದ್ದರು. ಬಳಿಕ ನಿರ್ಮಾಪಕನಾಗಿ ಮುಂದುವರಿಯಲು ಬಯಸಿದ್ದರೂ ಸರಿಯಾದ ನಿರ್ದೇಶಕ ಮತ್ತು ಸ್ಕ್ರಿಪ್ಟ್ ಸಿಗದೇ ಸಾಧ್ಯವಾಗಿಲಿಲ್ಲ ಎಂದು ಅವರೇ ಹೇಳಿಕೊಂಡಿದ್ದರು.
ದರ್ಶನ್ ಗಾಗಿ ಭಟ್ಟರು ಒಳ್ಳೆಯ ಪಾತ್ರ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಗರಡಿಯಲ್ಲಿ ಸಾಂಪ್ರದಾಯಿಕ ವ್ಯಾಯಾಮಶಾಲೆಗಳು ಮತ್ತು ಪೈಲ್ವಾನ್ಗಳ ಫಿಟ್ನೆಸ್ ಗಳ ಬಗ್ಗೆ ಕಥೆಯಿರುತ್ತದೆ ಎನ್ನಲಾಗಿದೆ.
ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.