ಮೈಸೂರು, ಜುಲೈ 26, 2020 (www.justkannada.in): ಆಗಸ್ಟ್ 1 ರಿಂದ ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್ ಓಪನ್ ಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಬಿಡುಗಡೆಗೆ ಚಿತ್ರ ತಂಡ ಪ್ಲಾನ್ ಮಾಡಿಕೊಂಡಿದೆ.
ಈಗಾಗಲೇ ದರ್ಶನ್ ಅಭಿಮಾನಿಗಳಿಂದ ವಿಶೇಷ ಮಾಸ್ಕ್ ಮೂಲಕ ‘ರಾಬರ್ಟ್’ ಪ್ರಚಾರ ಜೋರಾಗಿದ್ದು, ನಾಳೆ ಪ್ರಧಾನಿ ಮೋದಿ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದು, ನಂತರದಲ್ಲಿ ಕೇಂದ್ರದಿಂದ ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ.
ಥಿಯೇಟರ್ ಓಪನ್ ಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಘಟಾನುಘಟಿಗಳ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗಿದೆ.