ಚಾಮರಾಜನಗರ . ಮಾ.೧೩, ೨೦೧೪ : ಮಹಾ ಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಲಕ್ಷೋಪ ಲಕ್ಷ ಭಕ್ತರು. ಮಾದಪ್ಪನ ಆದಾಯದಲ್ಲಿ ಗಣನೀಯ ಏರಿಕೆ.
ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಮೂಲಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಣೆ. ಕೇವಲ 5 ದಿನಗಳಲ್ಲಿ 3.24 ಕೋಟಿ ರೂ. ಗೂ ಅಧಿಕ ಆದಾಯ.
ಚಿನ್ನದ ರಥ, ಬೆಳ್ಳಿರಥ, ಹುಲಿವಾಹನ ಸೇವೆ, ಮುಡಿ ಸೇವೆ ಸೇರಿ ವಿವಿಧ ಸೇವೆಗಳಿಂದ ಬಂದಿರುವ ಆದಾಯ. ಹುಂಡಿ ಹಣ ಹೊರತುಪಡಿಸಿ ಭಕ್ತರ ಸೇವೆಗಳಿಂದಲ್ಲೇ ಮೂರುಕಾಲು ಕೋಟಿ ನಗದು ಸಂಗ್ರಹ.
ದಿನದಿಂದ ದಿನಕ್ಕೆ ತನ್ನ ಆದಾಯದಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಮಾದಪ್ಪ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟ. ಅತ್ಯಂತ ಹೆಚ್ಚು ಆದಾಯ ಬರುವ ದೇವಾಲಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀ ಕ್ಷೇತ್ರ.
ಅಮಾವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ ಹಬ್ಬಗಳಂದು ನಡೆಯುವ ಜಾತ್ರಾ ಮಹೋತ್ಸವ. ಜತೆಗೆ ಅಮಾವಾಸ್ಯೆ ಸೇವೆ, ಸೋಮವಾರ, ಶುಕ್ರವಾರ ದಿನಗಳಂದೂ ಶ್ರಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಭಕ್ತರು.
ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಂದ ವಿವಿಧ ಸೇವೆ,ದೇಣಿಗೆ,ಕಾಣಿಕೆ,ಹುಂಡಿ ರೂಪದಲ್ಲಿ ಬರುವ ಕೋಟ್ಯಾಂತರ ರೂ ನಗದು. ವಾರ್ಷಿಕ ಸುಮಾರು 75 ರಿಂದ 100 ಕೋಟಿ ಆದಾಯ ಬರುತ್ತಿರುವ ಮಲೆ ಮಹದೇಶ್ವರ ಬೆಟ್ಟ. ಪ್ರಾಧಿಕಾರದ ವತಿಯಿಂದ ಮಾಹಿತಿ ಲಭ್ಯ.
ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ವಹಣೆ ನಡೆಯುತ್ತಿರುವ ಶ್ರೀ ಕ್ಷೇತ್ರ.
key words : Chamarajanagar ̲ Mahadeshwar ̲ betta ̲ mahashivarathri ̲ income