ಚಾಮರಾಜನಗರ,ಮೇ,3,2021(www.justkannada.in): ಆಕ್ಸಿಜನ್ ಸಮಸ್ಯೆಯಿಂದ 23 ಮಂದಿ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ, ಮೈಸೂರಿನಿಂದ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗಿಲ್ಲ. ಸಾವನಪ್ಪಿರುವವರು ಯಾವುದರ ಕೊರತೆಯಿಂದ ಸಾವನಪ್ಪಿದ್ದಾರೆ ಎಂಬ ವರದಿ ತರಿಸುವೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಚಾಮರಾಜನಗರ ಡಿಸಿ ಎಂ.ಆರ್ ರವಿ, ಜಿಲ್ಲಾಸ್ಪತ್ರೆಯಲ್ಲಿ ೧೨೦ ಹಾಸಿಗೆ ಇವೆ. ನಮ್ಮ ಬಳಿ ೩೫೦ ಆಕ್ಸಿಜನ್ ಸಿಲಿಂಡರ್ ಇವೆ. ದಿನವೊಂದಕ್ಕೆ ೨೪೦ ಸಿಲಿಂಡರ್ ಅವಶ್ಯಕತೆ ಇದೆ. ಅಗತ್ಯಕ್ಕೆ ಅನುಗುಣವಾಗಿ ಸಿಲಿಂಡರ್ ಪೂರೈಕೆ ಆಗಿಲ್ಲ ಎಂದು ತಿಳಿಸಿದರು.
ಸರ್ಕಾರ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇನೆ. ರಾತ್ರಿ 50 ಸಿಲಿಂಡರ್ ಬಂದಿವೆ. ಬೆಳಗ್ಗೆ 30 ಸಿಲಿಂಡರ್ ಬಂದಿವೆ. 10 ಗಂಟೆಯ ಬಳಿಕ ಆಕ್ಸಿಜನ್ ಟ್ಯಾಂಕರ್ ಬಳ್ಳಾರಿಯಿಂದ ಬರಲಿದೆ. ಇಂದಿನಿಂದ ಆಕ್ಸಿಜನ್ ಸಮಸ್ಯೆ ಜಿಲ್ಲೆಯಲ್ಲಿ ಬಗೆಹರಿಯಲಿದೆ ಎಂದು ಚಾಮರಾಜನಗರ ಎಂ.ಆರ್ ರವಿ ತಿಳಿಸಿದರು.
23 die in Chamarajanagar Govt. hospital due to scarcity of oxygen
Chamarajanagara, May 3, 2021 (www.justkannada.in): In a tragic incident, 23 persons who were infected from the Coronavirus in Chamarajanagar, who were admitted to the Government hospital lost their lives due to scarcity of oxygen. The Deputy Commissioner of Chamarajanagara District M.R. Ravi in his response said that the district had not received oxygen from Mysuru and he would demand a report from the hospital about the reason for the death of 223 persons.
Speaking to the press persons at Chamarajanagara today, the DC M.R. Ravi explained that there are 120 beds at the District Hospital and there were 350 oxygen cylinders. The hospital requires 240 cylinders in a day and the hospital had not received oxygen cylinders as per the requirement.
“I have spoken with the Chief Secretary to the Government. We have received 50 oxygen cylinders in the night and 30 in the morning today. An oxygen tanker will arrive from Ballari after 10 am today. Thus the oxygen problem in the District will be solved today,” he added.
Keywords: Chamarajanagara/ DC M.R. Ravi/ 23 persons die at District hospital/ scarcity of oxygen/ Coronavirus
Key words: chamarajanagar- 22 patient –death-DC –MR Ravi