ಚಾಮರಾಜನಗರ,ಡಿ,24,2019(www.justkannada.in): ಕಾಡಿನೊಳಗೆ ಡೋಲಿಯಲ್ಲೇ ಬರಲೇ ಬೇಕು ರೋಗಿಗಳು. ಕಾಡು ಪ್ರಾಣಿಗಳ ಬೀತಿಯಲ್ಲೇ ಜೀವದ ಹಂಗು ತೊರೆದು ಸಾಗಬೇಕು. ಇಲ್ಲಿನ ಜನರಿಗೆ ಕಲುಷಿತ ನೀರೇ ಅಮೃತವಿದ್ದಂತೆ. ಇವೆಲ್ಲಾ ಸಮಸ್ಯೆಗಳು ಕಂಡುಬಂದಿರುವುದು ಹ್ಯಾಟ್ರಿಕ್ ಗೆಲುವು ಸಾಧಿಸಿ ಶಾಸಕರಾಗಿರುವ ನರೇಂದ್ರ ಪ್ರತಿನಿಧಿಸುವ ಕ್ಷೇತ್ರದ ದೊಡ್ಡಾಣೆ ಪೋಡುವಿನಲ್ಲಿ…
ಹೌದು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದೊಡ್ಡಾಣೆ ಪೊಡಿನ ಜನರ ದುಸ್ಥಿತಿಯನ್ನ ಕೇಳೋರೆ ಇಲ್ಲ. ಇಲ್ಲಿನ ಜನರು ಅನಾರೋಗ್ಯಕ್ಕೊಳಗಾದರೇ ಇವರನ್ನ ಕಾಡಿನೊಳಗೆ ಡೋಲಿಯಲ್ಲೇ ಸಾಗಿಸಬೇಕು. ಅದುವೇ ಆ ದುರ್ಗಮ ಹಾದಿಯಲ್ಲಿ ನಡದೇ ಸಾಗಬೇಕು. ಇದೆಲ್ಲದರ ಜತೆಗೆ ಅಲ್ಲಿ ಕಾಡುಪ್ರಾಣಿಗಳ ಭೀತಿ ಬೇರೆ ಹೆಚ್ಚಾಗಿರುತ್ತದೆ. ಇನ್ನು ಮಾರ್ಗ ಮಧ್ಯದಲ್ಲಿ ಮದ್ಯೆ ತೊಂದರೆಯಾದರೆ ದೇವರೇ ಗತಿ.
ದೊಡ್ಡಾಣೆಯಲ್ಲಿ ವಾಸಿಸುತ್ತಿರುವ ಜನರು ಚಿಕಿತ್ಸೆಗೆ ಸುಳ್ವಾಡಿ ಆಸ್ಪತ್ರೆಗೆ ಬರಬೇಕು ದೊಡ್ಡಾಣೆಯಿಂದ ಮಾರ್ಟಳ್ಳಿ ಗೆ ಕಾಡು ಮಾರ್ಗದಲ್ಲೆ ಸಾಗಬೇಕಾಗಿದೆ. ಇದು ದಿನ ನಿತ್ಯದ ಕಥೆಯಾಗಿದೆ. ಇಲ್ಲಿನ ಜನರು ಕಲುಷಿತ ನೀರನ್ನೇ ಸೇವಿಸುತ್ತಿದ್ದು, ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಸ್ಥಿತಿ ದೇವರೇ ಬಲ್ಲ.
ಗ್ರಾಮದ ಜನರು ಚುನಾವಣೆಯನ್ನ ಬಹಿಷ್ಕರಿಸಿದರೂ ಸಹ ಇಲ್ಲಿನ ಸಮಸ್ಯೆ ಇನ್ನು ಬಗೆಹರಿದಿಲ್ಲ. ಇನ್ನು ಅಧಿಕಾರಿಗಳು ಜನನ ಪ್ರತಿನಿಧಿಗಳು ಇಲ್ಲಿನ ಜನರ ಸಮಸ್ಯೆಯನ್ನ ಕಂಡರೂ ಕಾಣದಂತೆ ಇದ್ದಾರೆ.
ಈ ಪೋಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಅಲ್ಲದೆ ಈ ದೊಡ್ಡಾಣೆಪೋಡನ್ನ ಚಕ್ರವರ್ತಿ ಸೂಲಿಬೆಲೆ ಅವರು ದತ್ತು ಪಡೆದಿದ್ದರು. ಹೀಗಾಗಿ ಇನ್ನಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಇಲ್ಲಿನ ಜನರ ಸಮಸ್ಯೆ ಆಲಿಸಿ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕಿದೆ.
Key words: chamarajanagar-doddane podu-patient-forest-Problems