ಮೈಸೂರು,ಮೇ,7,2021(www.justkannada.in): ಚಾಮರಾಜನಗರಕ್ಕೆ ಇನ್ನೂ ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಆರ್.ಧೃವನಾರಾಯಣ್, ಯಾರನ್ನೂ ಹೋಂ ಐಸೋಲೇಷನ್ ಮಾಡಬೇಡಿ. ಅಲ್ಲಿಂದಲೇ ಸೋಂಕು ಹೆಚ್ಚಾಗುತ್ತಿರೋದು. ವಸತಿ ಶಾಲೆಗಳಲ್ಲಿ ಹೋಂ ಐಸೋಲೇಷನ್ ಮಾಡಿಸಿ. ಚಿಮ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ಗಳ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಮೈಸೂರು, ಚಾಮರಾಜನಗರ ಡಿಸಿಗಳ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ಇಬ್ಬರೂ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನ ಮೀರಬಾರದು. ಏನೇ ಇದ್ರೂ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಬೇಕು. ನೇರವಾಗಿ ಮಾಧ್ಯಮಗಳ ಮುಂದೆ ಹೋಗುವುದು ಸರಿಯಲ್ಲ. ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ ಎಂದರು.
ಗೃಹ ಇಲಾಖೆ, ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿತ್ತಾ….?
ತೇಜಸ್ವಿ ಸೂರ್ಯ ಕಷ್ಟಪಟ್ಟು ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದಾರೆ ಎಂಬ ಸಿಎಂ ಹೇಳಿಕೆ ಹಿನ್ನೆಲೆ ಈ ಕುರಿತು ಕಿಡಿಕಾರಿದ ಆರ್.ಧೃವನಾರಾಯಣ್, ಸಿಎಂ ಹೇಳಿಕೆಯಿಂದ ಅವರೇ ಅಸರ್ಥರು ಎಂಬುದು ದೃಢಪಟ್ಟಿದೆ. ಗೃಹ ಇಲಾಖೆ, ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿತ್ತಾ. ಒಬ್ಬ ಸಂಸದ ದೊಡ್ಡ ದಂಧೆ ಬಯಲಿಗೆಳೆಯುವುದನ್ನ ಸಮರ್ಥನೆ ಅವರ ಅಸಮರ್ಥತೆಯನ್ನ ತೋರಿಸುತ್ತಿದೆ ಎಂದು ಲೇವಡಿ ಮಾಡಿದರು.
ಕೇಂದ್ರದಿಂದ ಆಕ್ಸಿಜನ್ ವ್ಯವಸ್ಥೆ ಆಗಿಲ್ಲ. ರಾಜ್ಯದ ಸಂಸದರಿಗೆ ನಾಚಿಕೆಯಾಗಬೇಕು. ರಾಜ್ಯದ ಪರವಾಗಿ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದ ಹಿಂಸಾಚಾರ ಖಂಡಿಸುವವರು ಕೋವಿಡ್ ನಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿಲ್ಲ. ಆದ್ರೆ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ರು ಅಂತ ಖಂಡಿಸುತ್ತಾರೆ. ಆದರೆ ಚಾಮರಾಜನಗರ ದುರಂತದ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಧ್ರುವನಾರಾಯಣ್ ಕಿಡಿಕಾರಿದರು.
Key words: Chamarajanagar – face – hazard-KPCC president -R. Dhruvanarayanan -mysore