ಚಾಮರಾಜನಗರ,ಸೆ,14,2019(www.justkannada.in): ಮಾತೃಭಾಷೆ ಕನ್ನಡಕ್ಕೆ ನೀಡಿರುವ ಪ್ರಾಮುಖ್ಯತೆಯಂತೆ ಹಿಂದಿ ಭಾಷೆ ಕಲಿಕೆಗೂ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಚಾಮರಾಜನಗರದಲ್ಲಿ ಇಂದು 6ನೇ ರಾಜ್ಯಮಟ್ಟದ ಹಿಂದೆ ಶೈಕ್ಷಣಿಕ ಸಮಾರಂಭ ಮತ್ತು ಹಿಂದಿ ದಿವಸ್ ಕಾರ್ಯಕ್ರಮ ನಡೆಯಿತು.
ನಗರದ ನಂದಿ ಭವನದಲ್ಲಿ ಆಯೋಜಿಸಲಾಗಿದ್ದ 6ನೇ ರಾಜ್ಯಮಟ್ಟದ ಹಿಂದೆ ಶೈಕ್ಷಣಿಕ ಸಮಾರಂಭ ಮತ್ತು ಹಿಂದಿ ದಿವಸ್ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಸಾಥ್ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾ ರ್ ಮಾತನಾಡಿ, ನಾವೆಲ್ಲರು ಮಾಜಿ ಪ್ರಧಾನಿ ದಿ.ಅಟಲ್ ಬಿ ಹಾರಿ ವಾಜಪೇಯಿ ಅವರನ್ನು ನೋಡಿ ಹಿಂದಿ ಕಲಿತವರು. ವಿಶ್ವ ಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಭಾರತದ ಪ್ರಥಮ ಪ್ರಧಾನಿಯಾದವರು. ಹೀಗಾಗಿ ರಾಜ್ಯದಲ್ಲಿ ನಾವು ನಮ್ಮ ಮಾತೃಭಾಷೆ ಕನ್ನಡಕ್ಕೆ ನೀಡಿರುವ ಪ್ರಾಮುಖ್ಯತೆಯಂತೆ ಹಿಂದಿ ಭಾಷೆ ಕಲಿಕೆಗೂ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು. ಹಿಂದಿ ಶಿಕ್ಷಕರ ಸಮಸ್ಯೆಗಳನ್ನು ನಮ್ಮ ಸರ್ಕಾರ ಆದಷ್ಟು ಬೇಗ ಪರಿಹರಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
Key words: chamarajanagar- Learn -Hindi -Education Minister – Suresh Kumar -advises