3 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಗೆ ಮನವಿ: ಸಿಎಂ ಅನುದಾನ ನೀಡುವ ವಿಶ್ವಾಸ – ಸಂಸದ ಸುನೀಲ್ ಬೋಸ್

ಮೈಸೂರು,ಫೆಬ್ರವರಿ,19,2025 (www.justkannada.in):  ಚಾಮರಾಜನಗರ ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂದು ಇರುವ ಹಣೆಪಟ್ಟಿ ತೆಗೆದುಹಾಕಲು  ಅಲ್ಲಿನ ಸಂಸದ ಸುನಿಲ್ ಬೋಸ್ ಪ್ರಯತ್ನಕ್ಕೆ ಮುಂದಾಗಿದ್ದು ಈ ಸಂಬಂಧ  ಸಿಎಂ ಸಿದ್ದರಾಮಯ್ಯ ಬಳಿ ಅನುದಾನಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಸುನೀಲ್ ಬೋಸ್, ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಅಂತ ಘೋಷಣೆ ಆಗಿದೆ ಅದರ ಅನುಗುಣವಾಗಿ ವಿಶೇಷ ಪ್ಯಾಕೇಜ್ ಗಳನ್ನು ಕೊಡುವ ಕೆಲಸ ಆಗುತ್ತಿಲ್ಲ. ನಾನು ಕೂಡ ಸಿಎಂ ಸಾಹೇಬರ ಗಮನಕ್ಕೆ ತಂದು ನನ್ನ ಕ್ಷೇತ್ರ ವ್ಯಾಪ್ತಿಯ ಎಚ್ ಡಿ ಕೋಟೆಯಿಂದ ಹಿಡಿದು ಹನೂರುವರೆಗೆ ವ್ಯವಸಾಯ ಮಾಡದೆ  ಬರಡು ಬಿದ್ದಿರುವ ಭೂಮಿಯನ್ನ ವ್ಯವಸಾಯದತ್ತ ತರುವ ಯೋಜನೆಯನ್ನ ರೂಪಿಸಲು ಸುಮಾರು 3 ಸಾವಿರ ಕೋಟಿ ಪ್ರಾಜೆಕ್ಟ್ ಮನವಿ ಮಾಡಿದ್ದೇನೆ  ಹಂತ ಹಂತವಾಗಿ ಹಣ ಬಿಡುಗಡೆ ಸಿಎಂ ಬಳಿ ಮನವಿ ಮಾಡಿದ್ದೇನೆ.

ಇದರಿಂದ ಬರಡು ಭೂಮಿಗಳಿಗೆ ನೀರಾವರಿ ಒದಗಿಸಬಹುದು. ಈಗಾಗಲೇ ನೀರಾವರಿ ಸೌಲಭ್ಯ ಇಲ್ಲದೆ ಅಲ್ಲಿನ ನಾಲೆಗಳು ಪಾಳು ಬಿದ್ದಂತಿವೆ. ಈಗಾಗಲೇ ಯೋಜನೆಯ ಡಿಪಿಆರ್ ತಯಾರಾಗಿದೆ. ಮುಖ್ಯಮಂತ್ರಿಗಳು ಯೋಜನೆಗೆ ಅನುದಾನ ನೀಡುವ ವಿಶ್ವಾಸ ಇದೆ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.

Key words: Chamarajanagar, MP, Sunil Bose, 3 thousand, crores, project, CM