ಚಾಮರಾಜನಗರ,ಮೇ,20,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರ ತಲೆದಂಡವಾಗಿದೆ.
ಹೌದು, ಪ್ರಕರಣ ಸಂಬಂಧ ಘಟನೆಗೆ ಚಾಮರಾಜನಗರ ಡಿಸಿಯೇ ನೇರ ಹೊಣೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ವರದಿ ನೀಡಿತ್ತು. ಇದೀಗ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾವುದೇ ಸ್ಥಳ ತೋರಿಸದೆ ಡಿಸಿ ಎಂಆರ್ ರವಿ ಅವರನ್ನ ವರ್ಗಾವಣೆ ಮಾಡಲಾಗಿದ್ದು ಈ ಮಧ್ಯೆ ಚಾಮರಾಜನಗರಕ್ಕೆ ಜಿಲ್ಲಾಧಿಕಾರಿಯನ್ನಾಗಿ ಸತೀಶ್ ಅವರನ್ನು ನೇಮಕ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇ 2ರಂದು ಆಮ್ಲಜನಕ ಸಿಗದೇ 24 ರೋಗಿಗಳು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಘಟನೆಗೆ ಮೈಸೂರು ಜಿಲ್ಲಾಡಳಿತ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ, ಘಟನೆಗೆ ಚಾಮರಾಜನಗರ ಡಿಸಿಯೇ ನೇರ ಹೊಣೆ ಎಂದು ವರದಿ ನೀಡಿತ್ತು.
Key words: Chamarajanagar -oxygen – case- Transfer –DC-MR Ravi.