ಚಾಮರಾಜನಗರ,ಮೇ,5,2021(www.justkannada.in): ಕನ್ನಡ ವಾಹಿನಿಯೊಂದು ಚಾಮರಾಜನಗರಕ್ಕೆ ಸಂಬಂಧಪಟ್ಟಂತೆ ಮೌಢ್ಯದ ಊರು ಎಂದು ಪದ ಬಳಕೆ ಮಾಡಿರುವುದು ಇದೀಗ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಾಹಿನಿಯ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ವಾಹಿನಿಯ ವಿರುದ್ಧ ಫೇಸ್ ಬುಕ್ ನಲ್ಲಿ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…
ಈ ಚಾನೆಲ್ ನಲ್ಲಿ ನಾನು ಏಳು ವರ್ಷ ಕೆಲಸ ಮಾಡಿದೀನಿ. ಹಳೆಯ ಆಡಳಿತ ಮಂಡಳಿಯಲ್ಲಿ ಒಬ್ಬೇ ಒಬ್ಬ ಅಸೂಕ್ಷ್ಮರು ಇರಲಿಲ್ಲ.
ಕಸುಬು ಗೊತ್ತಿಲ್ಲದ ಅಡ್ನಾಡಿಗಳು ಬಂದು ಚಾನೆಲ್ ಹೊಕ್ಕರೆ ಇನ್ನೇನಾದೀತು?
ಚಾಮರಾಜನಗರದ ಬಗ್ಗೆ ಸಿಂಪಲ್ಲಾಗಿ ಹೇಳ್ತೀನಿ ಕೇಳ್ರಪ್ಪಾ:
– ಶೇ.58 ರಷ್ಟು ಅರಣ್ಯ ಪ್ರದೇಶ ಹೊಂದಿರುವ ಪ್ರಕೃತಿ ತಾಣ.
– ಬಂಡಿಪುರ ರಾಷ್ಟ್ರೀಯ ಉದ್ಯಾನ, ಬಿಆರ್ಟಿ ಹುಲಿರಕ್ಷಿತಾರಣ್ಯ, ಮಲೆಮಹದೇಶ್ವರ, ಕಾವೇರಿ ವನ್ಯಧಾಮ ಇರೋದು ನಮ್ಮಲ್ಲೇ.
– ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳು ನಮ್ಮಲ್ಲಿವೆ.
– ಹೊಗೇನಕಲ್ ಜಲಪಾತ ನಮ್ಮದು
– ಕರ್ನಾಟಕದ ನಯಾಗರ ಭರಚುಕ್ಕಿ ನಮ್ಮದು
-ಕರ್ನಾಟಕದ ಜುರಾಸಿಕ್ ಪಾರ್ಕ್ ಜೋಡಿಗೆರೆ ಇರೋದು ನಮ್ಮಲ್ಲೇ.
– ವರನಟ ಡಾ.ರಾಜ್ ಕುಮಾರ್ ಚಾಮರಾಜನಗರ ಜಿಲ್ಲೆಯ ಕುವರ.
– ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ಜಾನಪದ ಮಹಾಕಾವ್ಯದ ತವರು ನಮ್ಮ ಜಿಲ್ಲೆ( ಮೊದಲ ಸ್ಥಾನದಲ್ಲಿ ಫಿನ್ ಲ್ಯಾಂಡಿನ ಕಲೆವಾಲ ಇದೆ).
ಇಷ್ಟೇ ಸಾಕಾ ಇನ್ನೂ ಬೇಕ? ನಿಮ್ಮ ಪುಣ್ಯ ಮೌಢ್ಯದ ಊರು ಎಂದ ನಿಮಗೆ ಇನ್ನೂ ಯಾರೂ ಮೆಟ್ನಲ್ಲಿ ಹೊಡೆಯದೇ ಇರೋದು!!
ಕೃಪೆ…
-ಗೌಡಹಳ್ಳಿ ಮಹೇಶ್
Key words: chamarajanagar- people- Superstition- Kannada news channel.