ದಾಳಿ ಮಾಡಿದ ಹುಲಿ ನರಭಕ್ಷಕ ಅಲ್ಲ: ಸೆರೆಹಿಡಿಯುವ ವಿಶ್ವಾಸ ಇದೆ- ಕಾರ್ಯಚರಣೆ ಬಗ್ಗೆ ಡಿಸಿಎಫ್ ಅಲೆಕ್ಸಾಂಡರ್ ಹೇಳಿಕೆ..

 

ಮೈಸೂರು,ಅ,10,2019(www.justkannada.in):  ಚಾಮರಾಜನಗರದ ಹುಲಿ ದಾಳಿಗೆ ಇಬ್ಬರು ಸಾವು  ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಡಿಸಿಎಪ್ ಅಲೆಕ್ಸಾಂಡರ್, ದಾಳಿ ಮಾಡಿದ ಹುಲಿ ನರಭಕ್ಷಕ ಅಲ್ಲ. ಹುಲಿಯನ್ನ ಸೆರೆ ಹಿಡಿಯುವ ವಿಶ್ವಾಸವಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಡಿಸಿಎಫ್ ಅಲೆಕ್ಸಾಂಡರ್, ದಾಳಿ ಮಾಡಿದ ಹುಲಿ ನರಭಕ್ಷಕ ಹುಲಿ ಅಲ್ಲ ಅಕ್ಸಿಡೆಂಟಲಿ ಆ ಘಟನೆಯಾಗಿದೆ. ವ್ಯಕ್ತಿ ಎದುರಿಗೆ ಬಂದಾಗ ದಾಳಿ ಮಾಡಿದೆ ಅಷ್ಟೆ. ಹುಲಿ ಕಾರ್ಯಾಚರಣೆಗಾಗಿ ನಮ್ಮ ಮೂರು ಆನೆಗಳನ್ನ ಕಳುಹಿಸಿದ್ದೇವೆ. ನಿನ್ನೆಯಿಂದಲೂ ಕೂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಗೆ ಸ್ಥಳೀಯರ ಸಹಕಾರ ಕೋರಿದ್ದೇವೆ ಎಂದು ಹೇಳಿದರು.

ಸಾಮಾನ್ಯವಾಗಿ ಹುಲಿ ದಾಳಿ ಮಾಡಿದ ಪ್ರದೇಶದಲ್ಲೇ ಇರಲಿದೆ‌. ಹೀಗಾಗಿ ಕ್ಯಾಮರಾ ಮೂಲಕ ಟ್ರಾಪ್ ಮಾಡಲು ಸಿದ್ಧತೆ ನಡೆದಿದೆ.  ಹುಲಿ ದಾಳಿ ಮಾಡಿದ ಸ್ಥಳಕ್ಕೆ ಮತ್ತೇ ಬರಲಿದೆ. ಇದು ಹುಲಿಯ ಸಾಮಾನ್ಯ ವರ್ತನೆ. ಹಾಗಾಗಿ ಹುಲಿ ಸೆರೆಹಿಡಿಯುವ ವಿಶ್ವಾಸ ಇದೆ ಎಂದು ಅಲೆಕ್ಸಾಂಡರ್ ವಿಶ್ವಾಸ ವ್ಯಕ್ತಪಡಿಸಿದರು.

ಹೆಣ್ಣು ಮದುವೆ ಮಾಡಿ ಕಳುಹಿಸುವ ಭಾವ ಕಾಡುತ್ತಿದೆ..

ದಸರಾ ಜಂಬೂ ಸವಾರಿ ಯಶಸ್ವಿಗೊಳಿಸಿ ಇಂದು ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಾಡಿನಿಂದ ಕಾಡಿಗೆ ಹೊರಟಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಅಲೆಕ್ಸಾಂಡರ್,  ಹೆಣ್ಣು ಮದುವೆ ಮಾಡಿ ಕಳುಹಿಸುವ ಭಾವ ಕಾಡುತ್ತಿದೆ. ನಿತ್ಯವು ಎರಡು ಮೂರು ಭಾರಿ ಬೇಟಿ ಕೊಡ್ತಾ ಇದ್ದವು. ಅರೋಗ್ಯ ವಿಚಾರಿಸುತ್ತಿದ್ದವು.  ತಾಲೀಮಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದವು. ಈಗ ಮತ್ತೆ ಅವುಗಳನ್ನ ಸ್ವಸ್ಥಾನದತ್ತ ಕಳುಹಿಸುತ್ತಿದ್ದೇವೆ. ಹೆಣ್ಣುಮಕ್ಕಳನ್ನ ಗಂಡನ ಮನೆಗೆ ಕಳುಹಿಸುವಾಗ ಯಾವ ಭಾವನೆ ಮೂಡುತ್ತದೆಯೋ ಅದೇ ಭಾವನೆ ಈಗ ಕಾಡುತ್ತಿದೆ ಎಂದು ಆನೆಗಳನ್ನು ವಾಪಸ್ ಕಳುಹಿಸುತ್ತಿರುವುದಕ್ಕೆ ಭಾವುಕತೆಯ ಮಾತುಗಳ್ಳನ್ನಾಡಿದರು.

Key words: chamarajanagar- tiger-oparation-DCF-Alexander-reaction-mysore