ಚಾಮರಾಜನಗರ, ಮೇ 07, 2020 : (www.justkannada.in news) : ಕೊರೋನಾ ಸಂಕಷ್ಟದ ನಡುವೆಯೂ ಹುಲಿ ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿರುವ ಘಟನೆ ನಡೆದಿದೆ.
ಬಂಡೀಪುರದ ಕುಂದಕೆರೆ ವಲಯದಲ್ಲಿ ಹುಲಿ ಕಾಡಿಗಟ್ಟಲು ಆನೆ ಜೊತೆಗೆ ಕೂಂಬಿಂಗ್ ಅಪರೇಷನ್ ನಡೆಸಲು ಮುಂದಾಗಿದ್ದಾರೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ.
ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಘಟನೆ. ಕಳೆದೊಂದು ವಾರದಿಂದ ನಾಲ್ಕೈದು ಹಸು ಬಲಿ ಪಡೆದಿರೋ ಹುಲಿರಾಯ. ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ ಹಿನ್ನಲೆ. ಹುಲಿ ಕಾಡಿಗಟ್ಟಲು ನಡೀತಿದೆ ಕೂಂಬಿಂಗ್ ಅಪರೇಷನ್.
ಕೂಂಬಿಂಗ್ ಅಪರೇಷನ್ ಗೆ ದಸರಾ ಗಜಪಡೆಯ ಆನೆಗಳಾದ ಜಯಪ್ರಕಾಶ, ಗಣೇಶ ಸೇರಿದಂತೆ ಇತರ ಆನೆಗಳ ಬಳಕೆ.
key words : chamarajanagara-forest-tiger-coombing-operation-elaphants-dasara