ಚಾಮರಾಜನಗರ , ಅ.13, 2019 : (www.justkannada.in news) ಜನಜಾನುವಾರಗಳ ಮೇಲಾಯ್ತು. ಈಗ ಆನೆ ಮರಿಯನ್ನೆ ತಿಂದು ಹಾಕಿದ ಹುಲಿ. ಬಂಡೀಪುರದ ಮೇಲುಕಾಮನಹಳ್ಳಿ ಬಳಿ ಅರಣ್ಯದಲ್ಲಿ ಘಟನೆ. ಆಗತಾನೆ ಜನಿಸಿದ ಆನೆ ಮರಿಯನ್ನು ಸ್ವಾಹ ಮಾಡಿರುವ ಹುಲಿ.
ಮೇಲುಕಾಮನಹಳ್ಳಿ ಅರಣ್ಯದಲ್ಲಿ ಆನೆ ಮರಿ ತಿಂದು ಹಾಕಿರುವ ಕುರುಹು ಪತ್ತೆ. ತಾಯಿ ಆನೆ ಹಾಗೂ ಇತರ ಆನೆಗಳು ಹುಲಿಯ ಜೊತೆ ಸೆಣಸಾಟ ನಡೆಸಿರುವ ಕುರುಹುಗಳು ಪತ್ತೆ. ಇದೇ ಪ್ರದೇಶದಲ್ಲಿ ಹುಲಿ ಅಡಗಿರುವ ಶಂಕೆ. ಈ ಪ್ರದೇಶದ ಕ್ಯಾಮೆರಾದಲ್ಲು ಹುಲಿಯ ಚಿತ್ರ ಸರೆ.
ಈ ಪ್ರದೇಶವನ್ನು ಕೇಂದ್ರೀಕರಿಸಿ ಕಾರ್ಯಾಚರಣೆ. ಹುಲಿ ಸೆರೆ ಕಾರ್ಯಾಚರಣೆಗೆ ರಾಣಾ ಸೇರ್ಪಡೆ. ಕಾಡುಗಳ್ಳರನ್ನು ಹಿಡಿಯುವಲ್ಲಿ ನಿಷ್ಣಾತನಾಗಿರುವ ನಾಯಿ ರಾಣಾ. ಕೆಲವೆಡೆ ಹುಲಿಸೆರೆ ಕಾರ್ಯಾಚ ರಣೆಯಲ್ಲಿ ಪಾಲ್ಗೊಂಡು ಅನುಭವ ಹೊಂದಿರುವ ರಾಣಾ.
ಐದು ದಿನ ಕಳೆದರೂ ಹುಲಿ ಸೆರೆ ಹಿಡಿಯದ ಬಗ್ಗೆ ಗ್ರಾಮಸ್ಥರ ಆ ಕ್ರೋಶ. ಕಾರ್ಯಾಚರಣೆ ನಡೆಸುತ್ತಿರುವ ರೀತಿಯ ಬಗ್ಗೆ ಆಕ್ಷೇಪ.
———-
key words : chamarajanagara-tiger-man.eater.tiger-operation-rana-dog