ಚಾಮರಾಜನಗರ,ಡಿ,20,2019(www.justkannada.in): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತವಾಗಿ ದೇಶಾದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ರಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯ ಜೆ.ಎಸ್ ಎಸ್ ಕಾಲೇಜು ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಸ್ವಾಗತಿಸಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಜೆ.ಎಸ್.ಎಸ್ ಕಾಲೇಜು ದೊಡ್ಡಹುಂಡಿ ಸರ್ಕಾರಿ ಕಾಲೇಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ತಮ್ಮ ಕಾಲೇಜು ಮುಂದಾಗ ಕಾಯ್ದೆ ಜಾರಿಗೆ ತಂದಿರುಯವುದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕಳೆದ 5-6 ವರ್ಷಗಳಿಂದ ಕೇಂದ್ರ ಸರಕಾರ ಹಲವು ನಿರ್ಣಯಗಳನ್ನು ಮಾಡಿ ಜನಸ್ನೇಹಿ, ರಾಷ್ಟ್ರೀಯ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ವಿದ್ಯಾರ್ಥಿ ಪರಿಷತ್ತಿನ ಹತ್ತಾರು ವರ್ಷಗಳಿಂದ ದೇಶದ ಹಿತ ದೃಷ್ಟಿಯಿಂದ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಬೇಕೆಂದು ಅಗ್ರಹಿಸುತ್ತಿತ್ತು. ಉದಾಹರಣೆಯೆಂಬಂತೆ 2012 ರಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಹೊರಹಾಕಲು ಅಗ್ರಹಿಸಿ ಚಿಕನ್ ನೆಕ್ ಚಲೋ ಹಮ್ಮಿಕೊಂಡು ಅಂದೆ ಅಗ್ರಹಿಸಿತ್ತು.
ಹಲವು ವರ್ಷಗಳ ಬೇಡಿಕೆ ಪ್ರಸ್ತುತ ಕಾರ್ಯರೂಪಕ್ಕೆ ಬಂದಿದ್ದು ಈಗ ನಡೆಯುತ್ತಿರುವ ಕೇಂದ್ರ ಸರಕರಾದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಬಿ ಮತ್ತು ಎನ್.ಆರ್.ಸಿ) ಜಾರಿಗೊಳಿಸಿದ್ದು ಭಾರತದ ಹಿತದೃಷ್ಟಿಯಿಂದ ಸರಿಯಾಗಿದೆ. ಅದನ್ನು ಕೋಟ್ಯಾಂತರ ವಿದ್ಯಾರ್ಥಿಗಳ ನಾಯಕತ್ವ ವಹಿಸಿರುವ ವಿದ್ಯಾರ್ಥಿ ಪರಿಷತ್ತು ಸ್ವಾಗತಿಸುತ್ತದೆ ಮತ್ತು ಕೇಂದ್ರ ಸರಕಾರದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
Key words: chamarajangar-Various- college- students -supported – Citizenship Amendment Act.