ಚಾಮರಾಜನಗರ,ಜುಲೈ,3,2023(www.justkannada.in): ಆಷಾಡ ಮಾಸದಲ್ಲಿ ಚಾಮರಾಜನಗರದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವ ಚಾಮರಾಜೇಶ್ವರ ರಥೋತ್ಸವ ಇಂದು ಅದ್ದೂರಿಯಾಗಿ ಜರುಗಿತು.
ಮೈಸೂರು ಅರಮನೆಯಿಂದ ಶ್ರೀ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವ ಆರಂಭವಾಗಿತ್ತು. ಮಧ್ಯಾಹ್ನ 12 ರಿಂದ 1 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ಜರುಗಿತು. ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮತ್ತೆ ದೇವಾಲಯದ ಆವರಣಕ್ಕೆ ಮೆರವಣಿಗೆ ಆಗಮಿಸಿತು. ಈಶ್ವರತ್ವ ಹಾಗೂ ರಾಜತ್ವ ಹೊಂದಿರುವ ಶ್ರೀ ಚಾಮರಾಜೇಶ್ವರ ರಥೋತ್ಸವ ಕೋವಿಡ್ ಬಳಿಕ ಇದೇ ಎರಡನೇ ಬಾರಿಗೆ ಜರುಗಿದೆ.
ಹಳೆ ರಥಕ್ಕೆ ಬೆಂಕಿ ಬಿದ್ದು ಕೆಲ ವರ್ಷಗಳಿಂದ ರಥೋತ್ಸವ ಸ್ಥಗಿತವಾಗಿತ್ತು ಇದೀಗ ಮತ್ತೆ ಆರಂಭವಾಗಿದ್ದು . ಹಲವು ವರ್ಷಗಳ ಬಳಿಕ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಜಮಾವಣೆಯಾಗಿದ್ದರು. ಆಷಾಡ ಮಾಸದಲ್ಲಿ ದೂರ ದೂರವಿರುವ ನವ ದಂಪತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ರಥಕ್ಕೆ ಹಣ್ಣು ದವನ ಎಸೆದು ನವದಂಪತಿಗಳು ಇಷ್ಟಾರ್ಥ ಸಿದ್ದಿಪಡೆದರು.
ಚಾಮರಾಜನಗರ, ಮೈಸೂರು ಜಿಲ್ಲೆ ಸೇರಿದಂತೆ ಹಲವೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವ ಹಿನ್ನೆಲೆ ಮುನ್ನಚ್ವರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೂಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Key words: Chamarajeshwar Rathotsava – Chamarajanagar -devotees