ನವದೆಹಲಿ, ಡಿಸೆಂಬರ್,24,2024 (www.justkannada.in): ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದ್ದು, ಫೆಬ್ರವರಿ 23 ರಂದು ದುಬೈನಲ್ಲಿ ಸಾಂಪ್ರದಾಯಿಕ ಎದುರಾಗಿ ಪಾಕಿಸ್ತಾನದ ವಿರುದ್ದ ಭಾರತ ತಂಡ ಸೆಣೆಸಾಡಲಿದೆ.
ಫೆಬ್ರವರಿ 19 ರಿಂದ ಮಾರ್ಚ್ 9ರವರೆಗೆ ಚಾಂಪಿಯನ್ಸ್ ಟ್ರೋಫಿ-2025 ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿವೆ. ಈ ಮಧ್ಯೆ ಭಾರತ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ಪಂದ್ಯಗಳನ್ನ ಟೀಂ ಇಂಡಿಯಾ ದುಬೈನಲ್ಲಿ ಆಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರೂಪ್ ಹಂತದ ಪಂದ್ಯ ಫೆಬ್ರವರಿ 23ರಂದು ನಡೆಯಲಿದೆ.
ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ವೇಳಾಪಟ್ಟಿ.!
ಫೆ.19 : ಪಾಕಿಸ್ತಾನ -ನ್ಯೂಜಿಲೆಂಡ್
ಫೆ.20: ಬಾಂಗ್ಲಾದೇಶ –ಭಾರತ
ಫೆ.21: ಅಫ್ಘಾನಿಸ್ತಾನ- ದಕ್ಷಿಣ ಆಫ್ರಿಕಾ
ಫೆ.22: ಆಸ್ಟ್ರೇಲಿಯಾ- ಇಂಗ್ಲೆಂಡ್
ಫೆ.23: ಪಾಕಿಸ್ತಾನ – ಭಾರತ
ಫೆ.24: ಬಾಂಗ್ಲಾದೇಶ-ನ್ಯೂಜಿಲೆಂಡ್
ಫೆ.25: ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾ
ಫೆ.26: ಅಫ್ಘಾನಿಸ್ತಾನ- ಇಂಗ್ಲೆಂಡ್,
ಫೆ.27: ಪಾಕಿಸ್ತಾನ-ಬಾಂಗ್ಲಾದೇಶ
ಫೆ.28: ಅಫ್ಘಾನಿಸ್ತಾನ-ಆಸ್ಟ್ರೇಲಿಯಾ
ಮಾ.1: ದಕ್ಷಿಣ ಆಫ್ರಿಕಾ-ಇಂಗ್ಲೆಂಡ್
ಮಾ.2: ನ್ಯೂಜಿಲೆಂಡ್- ಭಾರತ
ಮಾರ್ಚ್ 4: ಸೆಮಿಫೈನಲ್ 1
ಮಾರ್ಚ್ 5 – ಸೆಮಿಫೈನಲ್ 2,
ಮಾರ್ಚ್ 9 – ಫೈನಲ್
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತವೆ
Key words: Champions Trophy 2025, schedule, announced