ಚಾಮುಂಡಿ ಬೆಟ್ಟ :  ಪ್ರಾಧಿಕಾರ ರಚಿಸಿ ಎಂದು ಪತ್ರ ಬರೆದವರೇ ಈಗ ವಿರೋಧಿಸುತ್ತಿರುವುದು ವಿಪರ್ಯಾಸ.

Chamundi Hill: It is ironical that those who wrote the letter to set up an authority are now opposing it.

 

ಮೈಸೂರು, ಆ.16,2024: (www.justkannada.in news). ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ ಎಂದು ಒತ್ತಾಯಿಸಿದ್ದವರೆ ಈಗ ಪ್ರಾಧಿಕಾರ ವಿರೋಧಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಟೀಕಿಸಿದರು.

ಕೆಪಿಸಿಸಿ ಸೂಚನೆ ಮೇರೆಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದಿಷ್ಟು..

1-1-2024ರಿಂದ ಜಾರಿಗೆ ಬರುವಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಜಾರಿ ಮಾಡುವಂತೆ ಸರಕಾರ ಸೂಚಿಸಿತ್ತು. ಮೂರು ದಿನಗಳ ಹಿಂದೆ ಪ್ರಮೋದ ದೇವಿ ಒಡೆಯರ್ ಸುದ್ದಿಗೋಷ್ಠಿ ಮಾಡಿ ಇದಕ್ಕೆ ಆಕ್ಷೇಪ ತಿಳಿಸಿದ್ದಾರೆ.ಇದು ನಮ್ಮ ಆಸ್ತಿ ಸರ್ಕಾರ ಮದ್ಯಸ್ತಿಕೆ ಬೇಡ ಎಂದಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ಜೆಡಿಎಸ್ ನಾಯಕರು ಧ್ವನಿಗುಡಿಸಿದ್ದಾರೆ. ಎಂಎಲ್ ಸಿ ವಿಶ್ವನಾಥ್ ರವರು ಇದೆ ವಿಚಾರಕ್ಕೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ರಾಜಮನೆತನಕ್ಕೆ ತೊಂದರೆ ನೀಡುತ್ತಾರೆ ಎಂದಿದ್ದಾರೆ. ವಿಶ್ವನಾಥ್ ರವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಒಂದು ವೇಳೆ ಮಾಹಿತಿ ಕೊರತೆ ಇದ್ದರೆ ವಿಶ್ವನಾಥ್ ತಿಳಿದುಕೊಳ್ಳಲಿ. ವಿಶ್ವನಾಥ್, ಜಿಟಿ ದೇವೇಗೌಡ ಇಬ್ಬರು ಪ್ರಾಧಿಕಾರ ರಚನೆ ಬೇಡ ಎಂದಿದ್ದೀರಾ. ಈ ಹಿಂದೆ ಜಿಟಿ ದೇವೇಗೌಡ, ಪ್ರತಾಪ್ ಸಿಂಹ ಪ್ರಾಧಿಕಾರ ರಚನೆಗೆ ಪತ್ರ ಬರೆದಿದ್ದರು. ಈಗ ಪ್ರಮೋದ ದೇವಿ ಒಡೆಯರ್ ಪ್ರೆಸ್ ಮಾಡಿದ ಬಳಿಕ ಉಲ್ಟಾ ಹೇಳಿಕೆ ನೀಡುತ್ತಿದ್ದಾರೆ.

ಚಾಮುಂಡಿ ಬೆಟ್ಟ ಅರಣ್ಯ ಇಲಾಖೆ, ಗ್ರಾಪಂ, ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತಿದೆ. *ಪ್ರಸಾದ್ * ಯೋಜನೆ ಅಡಿಯಲ್ಲಿ ಚಾಮುಂಡಿ ಬೆಟ್ಟ ಜೀರ್ಣೋದ್ದಾರಕ್ಕೆ ಕೇಂದ್ರ ಸರ್ಕಾರ 48ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮಹಿಷಾಸುರ ಪ್ಲಾಜಾ ಅಭಿವೃದ್ಧಿಗೆ 5.37ಕೋಟಿ ಬಿಡುಗಡೆ. ಜತೆಗೆ ದೇವಿಕೆರೆ, ನಂದಿ ಬೆಟ್ಟ, ಚಾಮುಂಡಿ ಬೆಟ್ಟದ ಮೆಟ್ಟಿಲು, ವ್ಯೂವ್ ಪಾಯಿಂಟ್ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಇದರ ಬಗ್ಗೆ ಯಾಕೆ ಪ್ರತಾಪ್ ಸಿಂಹ ಮಾತನಾಡುತ್ತಿಲ್ಲ.

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಸಿಎಂ ಅಧ್ಯಕ್ಷರು, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ, ಮುಜರಾಯಿ ಇಲಾಖೆ ಸಚಿವರು ಉಪಾಧ್ಯಕ್ಷರು. ಮಹಾರಾಜರ ವಂಶಸ್ಥರು ಶಾಶ್ವತ ಸದಸ್ಯರು.

ನಿಮಗೆ ಹೇಗೆ ಬರುತ್ತೆ ಹೇಳಿ :

ಚಾಮುಂಡೇಶ್ವರಿ ದೇವಸ್ಥಾನ ನಿಮಗೆ ಹೇಗೆ ಬರುತ್ತೆ ಹೇಳಿ. ಪ್ರಮೋದ ದೇವಿ ಒಡೆಯರ್ ಗೆ ಪ್ರಶ್ನೆ ಹಾಕಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್.

ಚಾಮುಂಡೇಶ್ವರಿ ದೇವಸ್ಥಾನ ನಮಗೆ ಸೇರುತ್ತೆ ಎನ್ನುವುದಕ್ಕೆ ನಿಮ್ಮ ಬಳಿ ದಾಖಲೆ ಇದಿಯಾ. ಪ್ರಾಧಿಕಾರ ರಚನೆ ಮಾಡುದ್ರೆ ತೊಂದರೆಯಾಗುತ್ತದೆ ಎಂದು ಸ್ಟೇ ತಂದಿದ್ದೀರಾ. ಸ್ಟೇ ತೆರವು ಮಾಡಲಿಕ್ಕೆ ಸರ್ಕಾರ ಮುಂದಾಗುತ್ತದೆ. ಚಾಮುಂಡಿ ಬೆಟ್ಟ ಉಳಿಸಲು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗುತ್ತದೆ. ಪ್ರಾಧಿಕಾರ ರಚನೆ ಮಾಡೇ ಮಾಡುತ್ತೇವೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ.

ಅಪ್ಪನಿಗೆ ಹುಟ್ಟಿದ್ರೆ ಜೈಲಿಗೆ ಕಳುಹಿಸಿ :

ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ರನ್ನ ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಾವು ಸುಮ್ಮನೆ ಕುಳಿತಿದ್ದೇವೆ. ನೆನ್ನೆ ಮೊನ್ನೆ ಗೆದ್ದಂತಹ ಶಾಸಕ ಶ್ರೀವತ್ಸ ಸಿದ್ದರಾಮಯ್ಯರನ್ನ ಜೈಲಿನಲ್ಲಿ ಕುಳಿತು ಅಧಿಕಾರ ಮಾಡುತ್ತಾರೆ ಎಂದಿದ್ದಾರೆ.

ನಿನಗೆ ತಾಕತ್ತು, ಧಮ್ಮ, ನಿಮ್ಮ ಅಪ್ಪನಿಗೆ ಹುಟ್ಟಿದ್ರೆ ಸಿದ್ದರಾಮಯ್ಯರನ್ನ ಜೈಲಿಗೆ ಕಳುಹಿಸಿ ನೋಡೋಣ ಎಂದು ಸವಾಲು ಹಾಕಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಾಜಕೀಯ ತೆವಲಿಗೋಸ್ಕರ ಈ ರೀತಿ ಮಾತನಾಡೋದಲ್ಲ.ಕೆಲ ಬಿಜೆಪಿಯವರು ಇದನ್ನೇ ಟ್ರೋಲ್ ಮಾಡುತ್ತಾರೆ. ಈ ರೀತಿ ಟ್ರೋಲ್ ಮಾಡೋರಿಗೆ ಯಾವ ಮೆಟ್ಟಿನಲ್ಲಿ ಹೊಡಿಬೇಕು. ಈ ರೀತಿಯಾದ ಟ್ರೋಲ್ ಮಾಡೋರ ವಿರುದ್ಧ ಸೈಬರ್ ಕ್ರೈಮ್ ಗೆ ದೂರು ಕೊಡುತ್ತೇವೆ ಎಂದು ಎಚ್ಚರಿಸಿದರು.

key words: Chamundi Hill, It is ironical, that those who, wrote the letter, to set up, an authority, are now ,opposing it.