ಮೈಸೂರು, ಏ.೨೬,೨೦೨೫: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಧರ್ಮದರ್ಶನಕ್ಕೆ ಕಾಯುವ ಭಕ್ತರನ್ನು ಕಡೆಗಣಿಸಲಾಗುತ್ತಿದೆ. ಬದಲಿಗೆ ಹಣ ಕೊಟ್ಟವರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನ ಪಡೆಯಲು ವಿಳಂಬವಾಗುತ್ತಿದೆ, ಆದರೆ ದೇಣಿಗೆ (ಹಣ) ಕೊಡುವ ಭಕ್ತರಿಗೆ ಆದ್ಯತೆಯ ದರ್ಶನ ನೀಡಲಾಗುತ್ತಿದೆ ಎಂಬ ದೂರುಗಳು ಪದೇ ಪದೇ ಕೇಳಿ ಬರುತ್ತಲೇ ಇದೆ. ಇದು ಖಾಸಗಿ ದರ್ಶನ (Special Entry Darshan) ಅಥವಾ ವೇಗದ ದರ್ಶನ (VIP Darshan) ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಧರ್ಮದರ್ಶನ ಅಥವಾ ಉಚಿತ ದರ್ಶನಕ್ಕೆ ಸರದಿಸಾಲಿನಲ್ಲಿ ನಿಂತ ಭಕ್ತರು ಗಂಟೆಗಟ್ಟಲೇ ಕಾಯ್ದರು ಆ ಸಾಲು ಚಲಿಸುವುದೇ ಇಲ್ಲ. ಚಲಿಸಿದರೆ ಆಮೆ ನಡಿಗೆ. ಆದರೆ ಹಣ ಪಾವತಿಸಿ ಟಿಕೆಟ್ ಪಡೆದವರಿಗೆ ಮಾತ್ರ ವಿಶೇಷ ಆಧ್ಯತೆ ನೀಡಲಾಗುತ್ತಿದೆ ಎಂಬುದು ಆರೋಪ.
ಈ ಸಂಬಂದ ಮೈಸೂರಿನ ನಿವಾಸಿಯೊಬ್ಬರು ಚಾಮುಂಡಿಬೆಟ್ಟದ ಪ್ರಾಧಿಕಾರದ ಅಧಿಕಾರಿಗೆ ಇಂದು ದೂರವಾಣಿ ಮೂಲಕ ಮಾತನಾಡಿ ವ್ಯವಸ್ಥೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರಾಧಿಕಾರಕ್ಕೆ ಹಣವೇ ಮುಖ್ಯವಾದರೆ, ಉಚಿತ ದರ್ಶನ ವ್ಯವಸ್ಥೆ ಸ್ಥಗಿತಗೊಳಿಸಿ ಆಗ ಎಲ್ಲರೂ ಹಣ ಕೊಟ್ಟೇ ದೇವರ ದರ್ಶನ ಪಡೆಯುವರು. ಇದರಿಂದ ಪ್ರಾಧಿಕಾರಕ್ಕೂ ಆರ್ಥಿಕವಾಗಿ ಲಾಭವಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಮಜಾಯಿಷಿ ನೀಡಲು ಯತ್ನಿಸಿದ ಪ್ರಾಧಿಕಾರದ ಕಾರ್ಯದರ್ಶಿ, ಯಾವುದೇ ಕಾರಣಕ್ಕೂ ಉಚಿತ ದರ್ಶನ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಸಾಮಾನ್ಯ ಭಕ್ತರನ್ನು ಕಡೆಗಣಿಸುವ ಉದ್ದೇಶವಿಲ್ಲ. ದರ್ಮ ದರ್ಶನದ ಸರದಿ ಸಾಲಿನಲ್ಲಿ ನಿಂತವರನ್ನು ತಡೆಯುವ ಪ್ರಮಯವೇ ಇಲ್ಲ. ಇಂದು ಏನಾದರು ಸಮಸ್ಯೆ ಉಂಟಾಗಿದಲ್ಲಿ ಅದನ್ನು ಬಗೆಹರಿಸಲು ಯತ್ನಿಸುವುದಾಗಿ ಆಶ್ವಾಸನೆ ನೀಡಿದರು.
key words: Chamundi Hill, Devotees, ignored for Free darshan, Mysore
SUMMARY:
Chamundi Hill: Devotees ignored for darshan.Devotees waiting for free darshan at Chamundi Hill in Mysuru are being ignored. Instead, it has been alleged that preference is being given to those who gave money.