ಹೊಸ ವರ್ಷಾಚರಣೆಗೂ ಮುನ್ನವೇ ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಯುವಕರ ಪುಂಡಾಟ.

ಮೈಸೂರು,ಡಿಸೆಂಬರ್,31,2024 (www.justkannada.in):  ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದೆ.  ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ತಡೆಯಲು ಖಾಕಿಪಡೆ ಸಜ್ಜಾಗಿದೆ. ಇದೀಗ ಇದಕ್ಕೂ ಮುನ್ನವೇ ಚಾಮುಂಡಿ ಬೆಟ್ಟದ  ವ್ಯೂ ಪಾಯಿಂಟ್ ನಲ್ಲಿ ಯುವಕರು ಪುಂಡಾಟ ಮೆರೆದಿರುವ ಘಟನೆ ನಡೆದಿದೆ.

ಹೌದು,  ಹಾಡಹಗಲೇ ಬೆಳ್ಳಂಬೆಳಿಗ್ಗೆಯೇ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಪುಂಡರು ಮದ್ಯಪಾನ ಸೇವನೆ ಮಾಡಿದ್ದು, ಚಾಮುಂಡಿ  ಬೆಟ್ಟ ಏರಿ ಬರುವ ವಾಯುವಿಹಾರಿಗಳಿಗೆ ಇರುಸು ಮುರುಸು ಉಂಟು ಮಾಡಿದ್ದಾರೆ.  ನಾಲ್ಕು ಚಕ್ರ ವಾಹನವನ್ನು ಸಾರ್ವಜನಿಕ ವಾಹನ ಓಡಾಡುವ ರಸ್ತೆಯಲ್ಲಿ ನಿಲ್ಲಿಸಿ ಧೂಮಪಾನ ಮತ್ತು ಮದ್ಯಪಾನ ಮಾಡಿದ್ದು, ಈ ಅನಾಚಾರವನ್ನು ವಿಡಿಯೋ ಮಾಡಲು ಹೋದ ಮಾಧ್ಯಮದವರ ಮೇಲಲೂ ಪುಂಡರು ಹಲ್ಲೆ ಮಾಡಲು ಮುಂದಾದರು ಎನ್ನಲಾಗಿದೆ.

ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳದಲ್ಲಿ  ಮದ್ಯ ವ್ಯಸನಿಗಳಿಂದ  ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು,  ವೃದ್ಧರು ಹಾಗೂ ಮಹಿಳೆಯರು ಪುಂಡರಿಗೆ ಹಿಡಿಶಾಪ ಹಾಕಿದ್ದಾರೆ.

Key words: Chamundi Hill Road, riot,  Smoking, drinking alcohol