ಕ್ಷಮೆ ಕೇಳಿದ್ರೂ ಕೇಸ್ ಹಾಕಿದ್ದಾರೆ: ವಿಚಾರಣೆಗೆ ಹೋಗಲ್ಲ ಎಂದ ಚಂದ್ರಶೇಖರನಾಥ ಸ್ವಾಮೀಜಿ

ಬೆಂಗಳೂರು,ಡಿಸೆಂಬರ್,2,2024 (www.justkannada.in): ಮುಸ್ಲೀಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಹೇಳಿಕೆ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರ ನಡೆ ವಿರುದ್ದ ಚಂದ್ರಶೇಖರನಾಥ್ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಚಂದ್ರಶೇಖರನಾಥ ಸ್ವಾಮೀಜಿ, ಕ್ಷಮೆ ಕೇಳಿದ ಮೇಲೂ ಕೇಸ್ ಹಾಕಿದ್ದಾರೆ.  ಹೆಚ ಡಿಕೆ ಕರಿಯ ಎಂದವರ ಮೇಲೆ ಕೇಸ್ ಇಲ್ಲ. ಪಾಕ್ ಪಾಕ್ ಪರ ಘೋಷಣೆ ಕೂಗಿದವರ ಮೇಲೂ ಕ್ರಮ ಇಲ್ಲ. ಆದರೆ ನಾನು ಕ್ಷಮೆ ಕೇಳಿದರೂ ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದರು.

ನನಗೆ ಹುಷಾರಿಲ್ಲ ನಡೆಯೋಕೂ ಆಗಲ್ಲ, ಅನಾರೋಗ್ಯ ಕಾರಣಕ್ಕೆ ವಿಚಾರಣೆಗೆ ಹೋಗಲ್ಲ. ಪೊಲೀಸರೇ ಮಠಕ್ಕೆ ಬಂದರೆ ಹೇಳಿಕೆ ಕೊಡುತ್ತೇನೆ ಎಂದು ಚಂದ್ರಶೇಖರನಾಥ್ ಸ್ವಾಮೀಜಿ ಹೇಳಿದ್ದಾರೆ.

Key words: apologizing, case, Chandrashekaranath Swamiji