ಬೆಂಗಳೂರು,ಆ,20,2019(www.justkannada.in): ಇಂದು ನಮಗೆ ಅತ್ಯಂತ ಮಹತ್ವದ ದಿನವಾಗಿದ್ದು ಚಂದ್ರಯಾನ್ -2ನೌಕೆ ಚಂದ್ರನಿಗೆ ಇನ್ನಷ್ಟು ಹತ್ತಿರವಾಗಿದೆ. ವಿಕ್ರಮ್ ಲ್ಯಾಂಡರ್ ಸೆ. 2ರಂದು ನೌಕೆಯಿಂದ ಬೇರ್ಪಡಲಿದ್ದು ಸೆಪ್ಟಂಬರ್ 7ರಂದು ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್, ಚಂದ್ರಯಾನ್ -2 ನೌಕೆ ಚಂದ್ರನಿಗೆ ಇನ್ನಷ್ಟು ಹತ್ತಿರವಾಗಿದೆ. ಚಂದ್ರಯಾನ್ -2 ನಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಉಪಗ್ರಹ ಸೇರಿದ್ದು, ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಅಂಗಳಕ್ಕೆ ತಲುಪೋಕೆ ಇನ್ನೂ ನಾಲ್ಕು ಕಾರ್ಯಾಚರಣೆ ನಡೆಯಬೇಕಿದೆ ಎಂದು ಮಾಹಿತಿ ನೀಡಿದರು.
ಚಂದ್ರಯಾನ-2 ಯಶಸ್ವಿಯಾದರೆ ಹೊಸ ದಾಖಲೆ ಬರೆಯಲಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗುತ್ತಿರೋ ವಿಶ್ವದ ಮೊದಲ ಮೂನ್ ಮಿಷನ್ ಚಂದ್ರಯಾನ್ -2ಆಗಿದೆ. ವಿಕ್ರಮ್ ಲ್ಯಾಂಡರ್ ಸೆ. 2ರಂದು ನೌಕೆಯಿಂದ ಬೇರ್ಪಡಲಿದ್ದು, ಸೆ. 7ರಂದು ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಯಲಿದೆ. ಎರಡು ಕಾರ್ಯಾಚರಣೆಗಳ ಮೂಲಕ ಚಂದ್ರನ ಕಕ್ಷೆ ಸೇರಿಸಲಾಗುವುದು ಎಂದು ಕೆ.ಶಿವನ್ ತಿಳಿಸಿದರು.
ದೇಶಿ ತಂತ್ರಜ್ಞಾನದ ಸಹಾಯದಿಂದ ಇಸ್ರೋ ಚಂದ್ರನ ಅಧ್ಯಯನ ಮಾಡಲು ಹೊರಟಿದ್ದು ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶಕ್ಕೆ ಭಾರತ ಪಾತ್ರವಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಚಂದ್ರಯಾನ್-2 ಉಡಾವಣೆ ಮಾಡಿದೆ. ಚಂದ್ರಯಾನ್ -೨2 ಉಪಗ್ರಹ ಜುಲೈ 22ರಂದು ನಭಕ್ಕೆ ಜಿಗಿದಿತ್ತು.
Key words: Chandrayaan-2 – Earth – Moon -Vikram Lander – ISRO President -K Shivan