ಮೈಸೂರು,ಜೂನ್,27,2021(www.justkannada.in): ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಹಲವು ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ವಾಟಾಳ್ ನಾಗರಾಜ್, ಕನ್ನಡದ ಹೆಸರುಗಳನ್ನ ಬದಲಾಸಿದರೆ ಕೇರಳ ಗಡಿ ಬಂದ್ ಮಾಡುತ್ತೇವೆ. ಕೇರಳಾದವರು ಕರ್ನಾಟಕಕ್ಕೆ ಬರಲು ಬಿಡಲ್ಲ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ. ಕೇರಳ ಸರ್ಕಾರದೊಟ್ಟಿಗೆ ಮಾತುಕತೆ ನಡೆಸಿ ಹೆಸರು ಬದಲಿಸದಂತೆ ಹೇಳಬೇಕು. ಇಲ್ಲವಾದರೆ ಕೇರಳ ಗಡಿ ಬಂದ್ ಮಾಡುತ್ತೇವೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಎನ್.ಟಿ.ಎಂ ಕನ್ನಡ ಶಾಲೆ V/S ವಿವೇಕಾನಂದ ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ಕನ್ನಡ ಶಾಲೆ ಹೊಡೆಯಬಾರದು. ಕನ್ನಡ ಶಾಲೆ ಉಳಿಯಬೇಕು. ನೂರಾರು ವರ್ಷಗಳ ಇತಿಹಾಸವಿರುವ ಶಾಲೆ. ಕನ್ನಡವೇ ನಮ್ಮ ಉಸಿರು, ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ. ಕೂಡಲೇ ಸ್ಮಾರಕ ನಿರ್ಮಾಣ ವಿಚಾರ ಬಿಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಎಲ್ಲಾ ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳೆಲ್ಲಾ ಪ್ರತಿಭಟನೆ ಮಾಡಬೇಕಾಗುತ್ತದೆ. ಮೈಸೂರು ಹೋರಾಟದ ಮೈದಾನವಾಗುತ್ತದೆ. ಕನ್ನಡ ಶಾಲೆ ಎಂದಿನಂತೆ ಮುಂದುವರೆಯಬೇಕು.ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Key words: change – Kannada name –Kerala-border-bandh-vatal Nagaraj