ಮೈಸೂರು,ಜನವರಿ,23,2023(www.justkannada.in): ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ಅವರನ್ನು ಬದಲಾವಣೆ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಇಂದು ಮಾತನಾಡಿದ ಕುರುಬೂರು ಶಾಂತಕುಮಾರ್, ಮಾನವೀಯ ಮೌಲ್ಯಗಳಿಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವರು ಈ ಜಿಲ್ಲೆಗೆ ಅವಶ್ಯಕತೆ ಇಲ್ಲ. ಕಳೆದ ಹಲವಾರು ದಿನಗಳಿಂದ ಆನೆ ಚಿರತೆ ಹಾಗೂ ಹುಲಿಗಳಿಂದ ಅಮಾಯಕ ಮುಗ್ಧ ಜೀವಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೂ ಅವರಿಗೂ ಸಂಬಂಧವಿಲ್ಲದಂತೆ ಕಾಲ ಹರಣ ಮಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಚಾಕಲೇಟ್ ತರಲು ಹೋದ ಪುಟ್ಟ ಬಾಲಕನ ಸಾವು ಮಾನವೀಯ ಮೌಲ್ಯಗಳು ಇರುವ ಮನುಷ್ಯರಿಗೆ ಕಣ್ಣಂಚಿನಲ್ಲಿ ನೀರು ಬರುತ್ತಿದೆ. ಮಹಿಳೆಯರು ಸೇರಿದಂತೆ ಪುಟ್ಟ ಪುಟ್ಟ ಬಾಲಕರು ದಿನದಿಂದ ದಿನಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಡಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಚರ್ಚಿಸಿ. ಕಾಡಿನಿಂದ ಪ್ರಾಣಿಗಳು ಹೊರಬರದಂತೆ ಹಾಗೂ ನಾಡಿನಲ್ಲಿರುವ ಚಿರತೆಗಳನ್ನು. ಸೆರೆಹಿಡಿದು ಕಾಡಿಗೆ ಬಿಡುವ ಕಾರ್ಯಕ್ಕೆ ಚುರುಕು ನೀಡದೇ ಮತ್ತಷ್ಟು ಜೀವಗಳ ಬಲಿಗೆ ಕಾಯುತ್ತಿದ್ದಾರಾ.? ಎಂದು ಕಿಡಿಕಾರಿದರು.
ಬಾಲಕರು ಮಹಿಳೆಯರು ರೈತರು ಶೋಷಿತ ಸಮುದಾಯಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ರೈತರು ಹೊಲಗದ್ದೆಗಳಿಗೆ ತೆರಳಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಂಜೆ 6ರ ನಂತರ ಮನೆಯಿಂದ ಹೊರಬರದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ . ಕಣ್ಣ ಮುಚ್ಚಾಲೆ ಆಡುವ ವಿದ್ಯುತ್ ಕಂಪನಿ ಗಳಿಂದ ರೈತರಿಗೆ ಬಾರಿ ಅನಾನುಕೂಲ ಉಂಟಾಗಿದೆ. ವಿದ್ಯುತ್ ಬಂದಾಗ ಹೊಲಗದ್ದೆಗಳಿಗೆ ತೆರಳಿ ಪಂಪ್ಸೆಟ್ ಆನ್ ಮಾಡಬೇಕು ಇಲ್ಲದಿದ್ದರೆ ರೈತರು ಬೆಳೆ ಬೆಳೆಯಲು ಸಾಧ್ಯವಿಲ್ಲ. ಎಷ್ಟು ದಿನ ಮನೆಯಲ್ಲಿ ಇರಲು ಸಾಧ್ಯ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ತ್ರೈಮಾಸಿಕ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೆ ಈ ದುರ್ಘಟನೆಗಳು ನಡೆಯುತ್ತಿರಲಿಲ್ಲ ಎಂದರು.
ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಿ. ಮತ್ತೆ ಬೆಂಗಳೂರಿಗೆ ಹೋಗುವ ಸಚಿವರು ಮೈಸೂರು ಜಿಲ್ಲೆಗೆ ಅವಶ್ಯಕತೆ ಇಲ್ಲ. ಇವರು ಜನರ ಸಾವು ನೋವು ಹಾಗೂ ಕಷ್ಟಗಳಿಗೆ ಸ್ಪಂದಿಸದ ಸಚಿವರು ಧ್ವಜಾರೋಹಣ ನೆರವೇರಿಸಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಗಳಿಗೆ ಅವಮಾನ ಮಾಡುವ ಬದಲು ಸರ್ಕಾರ ಇವರನ್ನು ತಕ್ಷಣದಿಂದಲೇ ಬದಲಾವಣೆ ಮಾಡಿ ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
Key words: Change- Mysore -district in-charge -minister – Kuruburu Shanthakumar