ಬೆಂಗಳೂರು, ಮಾರ್ಚ್ 25, 2022 (www.justkannada.in): ಆಕ್ಯುಪೆನ್ಸಿ ಸರ್ಟಿಫಿಕೆಟ್ ಇಲ್ಲದಿರುವ ಕಾರಣದಿಂದಾಗಿ ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕಗಳನ್ನು ಪಡೆಯಲು ಹೆಣಗಾಡುತ್ತಿದ್ದಂತಹ ಬೆಂಗಳೂರು ಮಹಾನಗರದಲ್ಲಿರುವ ಸುಮಾರು ಐದು ಲಕ್ಷ ಕಟ್ಟಡ ಮಾಲೀಕರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ವಿದ್ಯುತ್ ಇಲಾಖೆಯು ಇಂತಹ ಕಟ್ಟಡಗಳಿಗೆ ಒಸಿ ಪ್ರಮಾಣಪತ್ರಗಳು ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿಯಮಗಳಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ.
ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಅವರು ಶೀಘ್ರದಲ್ಲೇ ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲ್ಲಿದ್ದಾರೆ. ಈ ಹಿಂದೆ ಇಂಧನ ಖಾತೆಯನ್ನು ಹೊಂದಿದ್ದಂತಹ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಟ್ಟಡ ನಿರ್ಮಾಣದ ಬೈಲಾಗಳನ್ನು ಉಲ್ಲಂಘಿಸಿ ಅನುಮೋದಿತ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿ ನಿರ್ಮಿಸಿರುವಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವಂತೆ ಆದೇಶ ಹೊರಡಿಸಿದ್ದರು.
ಅದರಿಂದಾಗಿ ಬೆಂಗಳೂರು ಮಹಾನಗರದ ಅನೇಕ ಕಟ್ಟಡಗಳ ಮಾಲೀಕರು ಸಂಕಷ್ಟಕ್ಕೀಡಾಗಿ, ಕಳೆದ ಐದು ವರ್ಷಗಳಿಂದ ತಮ್ಮ ಕೋಪವನ್ನು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಇಂಧನ ಇಲಾಖೆಯ ಮೇಲೆ ತೋರಿಸುತ್ತಿದ್ದರು.
ಕಟ್ಟಡಗಳ ಮಾಲೀಕರ ಈ ಅನಾನುಕೂಲವನ್ನು ಪರಿಗಣಿಸಿ ಬೆಂಗಳೂರು ನಗರದ ಒಂದು ಎಂಎಲ್‌ಎಗಳ ನಿಯೋಗ ಇಂಧನ ಸಚಿವ ಸುನಿಲ್ ಕುಮಾರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ವಿದ್ಯುತ್ ಸಂಪರ್ಕವನ್ನು ಪಡೆಯಲು ಕಡ್ಡಾಯ ಮಾಡಲಾಗಿದ್ದಂತಹ ಒಸಿ ನಿಯಮವನ್ನು ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದರು.
ಈ ಮನವಿಯನ್ನು ಪರಿಗಣಿಸಿದ ಇಂಧನ ಸಚಿವರು ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ವಿದ್ಯುತ್ ಸಂಪರ್ಕಗಳನ್ನು ಒದಗಿಸಲು ಸಮ್ಮತಿಯನ್ನು ಪಡೆದುಕೊಂಡಿದ್ದಾರೆ.
ಈ ಸಂಬಂಧ ನಿರ್ಧಾರ ಕೈಗೊಂಡಿರುವ ಕಡತವನ್ನು ಮಾರ್ಚ್ 22ರಂದು ಕರ್ನಾಟಕ ವಿದ್ಯುತ್ ನಿರ್ಬಂಧ ಆಯೋಗ (ಕೆಇಆರ್‌ಸಿ) ಕಳುಹಿಸಲಾಗಿದ್ದು, ಬೆಂಗಳೂರಿನಲ್ಲಿ ಬುಧವಾರದಂದು ಇಂಧನ ಇಲಾಖೆಯೊಂದಿಗೆ ಉನ್ನತ-ಮಟ್ಟದ ಸಭೆಯೊಂದನ್ನು ಮಾನ್ಯ ಸಚಿವರು ನಡೆಸಿದರು.
ಸಚಿವರ ಮುಂದಾಳತ್ವದಲ್ಲಿ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಂಪರ್ಕಗಳನ್ನು ಒದಗಿಸುವಲ್ಲಿ ಇದ್ದಂತಹ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಈ ನಿರ್ಧಾರ ವಿದ್ಯುತ್ ಸರಬರಾಜು ಇಲ್ಲದಿರುವಂತಹ ಗ್ರಾಮೀಣ ಪ್ರದೇಶಗಳಲ್ಲಿರುವ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ರಾಜ್ಯ ಸರ್ಕಾರದ ಜನಪ್ರಿಯ ‘ಬೆಳಕು’ ಕಾರ್ಯಕ್ರಮದೊಂದಿಗೆ ಅನುಷ್ಠಾನವಾಗುತ್ತಿರುವುದು ಕಾಕತಾಳೀಯವೆನಿಸಿದೆ.
ಈ ನಿರ್ಧಾರದ ಬಗ್ಗೆ ಮಾತನಾಡಿದ ಸಚಿವ ಸುನಿಲ್ ಕುಮಾರ್ ಅವರು, “ಒಸಿ ಪ್ರಮಾಣಪತ್ರ ಇಲ್ಲದಿರುವ ಕಾರಣದಿಂದಾಗಿ ವಿದ್ಯುತ್ ಸಂಪರ್ಕವೇ ಇಲ್ಲದಿರುವಂತಹ ಕಟ್ಟಡ ಮಾಲೀಕರುಗಳಿಂದ ನಮಗೆ ಹಲವಾರು ದೂರುಗಳು ಬಂದಿದ್ದವು. ಬೆಂಗಳೂರಿನ ಕೆಲವು ಎಂಎಲ್ ಎಗಳು ಸಹ ಈ ಸಂಬಂಧ ನನ್ನನ್ನು ಭೇಟಿ ಮಾಡಿ, ಸನ್ನಿವೇಶವನ್ನು ವಿವರಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಓಸಿ ಪ್ರಮಾಣಪತ್ರ ಇಲ್ಲದಿರುವಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ನಿರ್ಧಾರದ ಕುರಿತು ಸದ್ಯದಲ್ಲಿಯೇ ಅಧಿಕೃತ ಘೋಷಣೆಯನ್ನು ಹೊರಡಿಸಲಿದೆ,” ಎಂದಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Changes -rules – electricity –without- OC.