ಬೆಂಗಳೂರು ಡಿಸೆಂಬರ್ 13, 2022(www.justkannada.in): ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳ ನಡುವೆ ಪ್ಲೇಟುಗಳು ಮತ್ತು ಕೈಗಳನ್ನು ತೊಳೆಯಲು ನೂಕಾಟವನ್ನು ತಡೆಗಟ್ಟುವ ಸಲುವಾಗಿ ಮಧ್ಯಾಹ್ನದ ಬಿಸಿಯೂಟದ ಸಮಯವನ್ನು ಬದಲಾಯಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹೊರಡಿಸಿರುವ ಒಂದು ಸುತ್ತೋಲೆಯಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಸಮಯವನ್ನು ಮಧ್ಯಾಹ್ನ 1 ಗಂಟೆಯಿಂದ 1.45ರ ನಡುವೆ ಹಾಗೂ ೬-೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ೨ ಗಂಟೆಯಿಂದ ೨.೪೦ರ ನಡುವೆ ಬಿಡುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಶಿಫಾರಸ್ಸುಗಳ ಮೇರೆಗೆ ಇಲಾಖೆಯು, ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಹಾಗೂ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲನ್ನು ತಯಾರಿಸುವಾಗ ಗುಣಮಟ್ಟ ಹಾಗೂ ನೈರ್ಮಲ್ಯವನ್ನು ನಿರ್ವಹಿಸಬೇಕಾಗಿರುವ ಪ್ರಾಮುಖ್ಯತೆಯನ್ನು ಗಮನಿಸಿ ಶಾಲೆಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ.
ಮಧ್ಯಾಹ್ನದ ಬಿಸಿಯುಟದ ಸಮಯ ಬದಲಾವಣೆಯ ಜೊತೆಗೆ, ವಿದ್ಯಾರ್ಥಿಗಳು ಊಟ ಸೇವಿಸಲು ಸ್ಟೀಲ್ ತಟ್ಟೆಗಳನ್ನು ಬಳಸುವುದನ್ನು ಖಾತ್ರಿಪಡಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಪ್ಲೇಟುಗಳ ಕೊರತೆ ಇದ್ದರೆ ಸ್ಟೀಲ್ ಪ್ಲೇಟುಗಳನ್ನು ಹೊಂದಲು ದಾನಿಗಳನ್ನು ಸಂಪರ್ಕಿಸುವಂತೆ ಶಾಲೆಗಳಿಗೆ ಇಲಾಖೆ ತಿಳಿಸಿದೆ. “ಶಾಲೆಗಳು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಪ್ಲೇಟು ಹಾಗೂ ಲೋಟಗಳನ್ನು ತರುವಂತೆ ತಿಳಿಸಬಾರದು,” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇತರೆ ಸೂಚನೆಗಳು
- ಅಡುಗೆ ತಯಾರಿಸುವಾಗ ಹಾಗೂ ಊಟ ಬಡಿಸುವಾಗ ಸಂಬಂಧಪಟ್ಟ ಸಿಬ್ಬಂದಿಗಳು ಕಡ್ಡಾಯವಾಗಿ ತಲೆಗೆ ಟೋಪಿ ಹಾಗೂ ಏಪ್ರನ್ ಅನ್ನು ಧರಿಸಿರಬೇಕು
- ಗೋಡೌನ್‌ನಿಂದ ಆಹಾರ ಧಾನ್ಯಗಳನ್ನು ತಂದು ಬಳಸುವಾಗ ‘First-in-first-out’ ಹಾಗೂ ‘first-enter-first-out’ ವ್ಯವಸ್ಥೆಯನ್ನು ಪಾಲಿಸಬೇಕು
- ಬೇಯಿಸಿದ ಆಹಾರವನ್ನು ಮಕ್ಕಳಿಗೆ ನೀಡುವ ಮುಂಚೆ ಗುಣಮಟ್ಟವನ್ನು ಪರಿಶೀಲಿಸಲು ರುಚಿ ನೋಡಬೇಕು
- ವಾರಕ್ಕೊಮ್ಮೆ ಮಕ್ಕಳಿಗೆ ನೀಡುವ ಐರನ್ ಹಾಗೂ ಫೋಲಿಕ್ ಆಸಿಡ್ ಸಪ್ಲಿಮೆಂಟೇಷನ್ (WIFS) ಹಾಗೂ ಜಂತುಹುಳು ಮಾತ್ರೆಗಳ ಎಕ್ಸ್ಪೈರಿ ದಿನಾಂಕವನ್ನು ಪರಿಶೀಲಿಸಬೇಕು
- ಸರ್ಕಾರೇತರ ಸಂಸ್ಥೆಗಳಿಂದ ಸರಬರಾಜು ಮಾಡುತ್ತಿರುವ ಆಹಾರವಾದರೆ, ಶಾಲೆಗಳು ಸರಬರಾಜು ಮಾಡುವ ಆಹಾರದ ಪಾತ್ರೆ ಸರಿಯಾಗಿ ಮುಚ್ಚಿದ ಸ್ಥಿತಿಯಲ್ಲಿದೆಯೇ, ಹಾಗೂ ತಾಪಮಾನಗಳ ವಿವರಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು.
- ತರಗತಿವಾರು ಫಲಾನುಭವಿ ಹಾಜರಾತಿಯನ್ನು ದಾಖಲಿಸಿಕೊಳ್ಳಬೇಕು
- ಶಾಲಾ ಮಟ್ಟದಲ್ಲಿ ಮಧ್ಯಾಹ್ನದ ಬಿಸಿಯುಟ ಯೋಜನೆಯ ನಿಗಾವಣೆ ಮಾಡಲು ತಾಯಂದಿರನ್ನು ಒಳಗೊಂಡಿರುವ ಸಮಿತಿಗಳನ್ನು ರಚಿಸಬೇಕು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Changing -time –bisiyuta- afternoon – crowding – schools.