‘ಚನ್ನಪಟ್ಟಣದಿಂದಲೇ ಡಿಕೆಶಿ ರಾಜಕೀಯ ಅಂತ್ಯ’ ಎಂಬ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು,ಜೂನ್,21,2024 (www.justkannada.in): ಚನ್ನಪಟ್ಟಣದಿಂದಲೇ ಡಿಕೆ ಶಿವಕುಮಾರ್ ರಾಜಕೀಯ ಅಂತ್ಯ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಸಿ.ಟಿ ಯೋಗೇಶ್ವರ್ ಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್,  ನನ್ನ ರಾಜಕೀಯ ಅಂತ್ಯದ ಬಗ್ಗೆ ತೀರ್ಮಾನಿಸುವುದು ಜನರು. ದೊಡ್ಡವರ ಮಾತಿಗೆ  ನಾನು ಉತ್ತರ ನೀಡಲ್ಲ ನಾನು ಚನ್ನಪಟ್ಟಣದವರು ಜನರ ಬಳಿ ಕೇಳಿದ್ದೇನೆ.  ನಿಮ್ಮ ಋಣ ತೀರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ ಎಂದರು.

ನನ್ನ ಹಿಂದೆ ಒಂದು ಶಕ್ತಿ ಇದೆ. ಅದೇ ಜನರು.  ಜನರು ಮತ ನೀಡುವ ವಿಶ್ವಾಸವಿದೆ.  ನಾನು ಕನಕಪುರದ ಶಾಸಕ. ಪಕ್ಷದ ಅಧ್ಯಕ್ಷ. ನನಗೆ ಜವಾಬ್ದಾರಿ ಮುಖಂಡತ್ವ ಇದೆ.  ನಾನು ಸಿಎಂ ಜತೆ ಚುನಾವಣೆ ಬಗ್ಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Key words: channapatna, DCM, DK Shivakumar, CP Yogeshwar