ಮೈಸೂರು,ಜನವರಿ,15,2022(www.justkannada.in): ಸ್ವದೇಶಿ ಉತ್ಪನ್ನಗಳ ಬಳಕೆಗೆ ಉತ್ತೇಜಿಸಿಲು ರಾಜವಂಶಸ್ಥೆ ತ್ರಿಶಿಕಾ ಕುಮಾರಿ ಅವರು ಮುಂದಾಗಿದ್ದು, ಸಫಾರಿ ಸೆಟ್ ಗೊಂಬೆಗಳ ತಯಾರಿ ಮಾಡಲಾಗಿದೆ.
ರಾಜವಂಶಸ್ಥೆ ತ್ರಿಶಿಕಾ ಕುಮಾರಿ ಅವರ ಕಲ್ಪನೆಯಲ್ಲಿ ಮೂಡಿಬಂದ ಗೊಂಬೆಗಳು ಕುರುನಾಡಿನ ಕಾಡಿನ ವೈಭವನ್ನು ಸಾರುತ್ತಿವೆ. ಮೈಸೂರು ರಾಜವಂಶಸ್ಥರ ಕಾಳಜಿಯಿಂದ ವನಸಿರಿಯ ವೈಭವ ತಯಾರಾಗಿದ್ದು, ಸ್ವದೇಶಿ ಚನ್ನಪಟ್ಟಣದ ಆಟಿಕೆಗಳನ್ನು ಉತ್ತೇಜಿಸುವುದು ನನ್ನ ಪ್ರಾಮಾಣಿಕ ಗುರಿ ಎಂದು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ತಿಳಿಸಿದ್ದಾರೆ. ಕರ್ನಾಟಕದ ಅರಣ್ಯ, ವನ್ಯ ಜೀವಿಗಳ ಬ್ರಾಂಡ್ ಮಾಡುತ್ತ ಚನ್ನಪಟ್ಟಣದ ಗೊಂಬೆಗಳ ತಯಾರಿಕೆಗೆ ತ್ರಿಶಿಕಾ ಕುಮಾರಿ ಅವರು ಸಾಥ್ ನೀಡಿದ್ದು, ಮಕ್ಕಳಿಗಾಗಿ ವನ್ಯ ಪ್ರಾಣಿಗಳು ಅರಣ್ಯ ಸಂಪತ್ತಿನ ಸಂಬಂಧಿಸಿದ ಗೊಂಬೆಗಳ ತಯಾರಿಸಲಾಗಿದೆ.
ಈ ಕುರಿತು ಮಾತನಾಡಿರುವ ರಾಜವಂಶಸ್ಥೆ ತ್ರಿಷಿಕಾ ಕುಮಾರಿ, ನಮ್ಮ ಕುಟುಂಬ ಪರಂಪರೆಯ ಪೋಷಕರಾಗಿದ್ದಾರೆ. ಈ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುವುದು ನನ್ನ ಪ್ರಮುಖ ಆಸಕ್ತಿ. ನನ್ನ ಕಲ್ಪನೆಯಿಂದ ಕೆಲವು ಹೊಸ ಆಟಿಕೆಗಳನ್ನು ತಯಾರಿಸಲಾಗಿದ್ದು, ಅವುಗಳಲ್ಲಿ ಪ್ರಮುಖವಾಗಿ ಸಫಾರಿ ಸೆಟ್ ಒಂದಾಗಿದೆ. ಇದು ಕರ್ನಾಟಕದ ಅರಣ್ಯದಲ್ಲಿ ನಾವು ಕಾಣಬಹುದಾದ ಪ್ರಾಣಿಗಳಿಂದ ಪ್ರೇರಿತವಾಗಿದೆ. ಆಟಿಕೆಗಳು ಸಂಪೂರ್ಣವಾಗಿ ಚನ್ನಪಟ್ಟಣದಲ್ಲಿ ಕರಕುಶಲವಾಗಿದ್ದು, ನಾನು ಅದರ ಮೇಲ್ವಿಚಾರಣೆ ಮಾಡಿದ್ದೇನೆ.
ಚನ್ನಪಟ್ಟಣದ ಆಟಿಕೆ ತಯಾರಿಕೆಯ ಪರಂಪರೆ ಹಾಗು ಕರ್ನಾಟಕದ ಅದ್ಭುತ ವನ್ಯಜೀವಿಗಳ ಸಮ್ಮಿಲನದಿಂದ ಪ್ರೇರಿತವಾಗಿದೆ. ಈ ಉತ್ಪನ್ನವು ಭಾರತದ ಪ್ರಾಚೀನ ಕರಕುಶಲ ಪರಂಪರೆ ಹಾಗೂ ನಮ್ಮ ವನ್ಯಜೀವಿಗಳು ಮತ್ತು ಕಾಡನ್ನು ಅರ್ಥಮಾಡಿಕೊಳ್ಳಲು ಸಹಾಯಕ. ಮಕ್ಕಳು ಹಾಗು ಪೋಷಕರೂ ಸಹ ಈ ಆಟಿಕೆಗಳನ್ನು ಆನಂದಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಾಜ ವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಬರೆದುಕೊಂಡಿದ್ದಾರೆ.
Key words: Channapatna- dolls –mysore- Dynasty-thrishika kumari