ಬೆಂಗಳೂರು,ಡಿಸೆಂಬರ್,30,2023(www.justkannada.in): ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ಗುರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆಗೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಶಿಕ್ಷಣ ಸಚಿವರ ಪಾಡೇ ಹೀಗಾದ್ರೆ ಹೇಗೆ..? ಚೆಕ್ ಬೌನ್ಸ್ ಅಂದ್ರೆ ಮೋಸ ಮಾಡಿದ್ದಾರೆ ಅಂತಾ. ಕೋರ್ಟ್ ಶಿಕ್ಷೆ ವಿಧಿಸಿದರೂ ಸಹ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನ ನೀಡಿಲ್ಲ. ಸರ್ಕಾರ ಲೂಟಿ ಹೊಡೆಯಲು ಒಂಟಿ ಕಾಲಲ್ಲಿ ನಿಂತಿದೆ . ಕೂಡಲೇ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 6,96, 70,000 ರೂ. ದಂಡ ವಿಧಿಸಿದೆ.
Key words: check bounce –case- R. Ashok –demands- resignation -Minister -Madhu Bangarappa.